BELAGAVI

29ಕ್ಕೇರಿದ ಕೃಷ್ಣ ಮೃಗಗಳ ಸಾವಿನ ಸಂಖ್ಯೆ!!!

Share

ಬೆಳಗಾವಿಯ ಭೂತರಾಮನಹಟ್ಟಿ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವು ಮುಂದುವರಿದಿದ್ದು, ಕಳೆದ ರಾತ್ರಿ ಮತ್ತೊಂದು ಕೃಷ್ಣಮೃಗವು ಸಾವನ್ನಪ್ಪಿದೆ. ಇದರೊಂದಿಗೆ, ಮೃಗಾಲಯದಲ್ಲಿ ಮೃತಪಟ್ಟ ಕೃಷ್ಣಮೃಗಗಳ ಒಟ್ಟು ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಈ ಘಟನೆಯು ಮೃಗಾಲಯದ ಸಿಬ್ಬಂದಿ ಹಾಗೂ ವನ್ಯಜೀವಿ ಪ್ರೇಮಿಗಳಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ನವೆಂಬರ್ 13ರಂದು 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಆದರೆ, ನಿನ್ನೆ ಒಂದೇ ದಿನ ಬರೋಬ್ಬರಿ 20 ಕೃಷ್ಣಮೃಗಗಳ ಸಾವು ಸಂಭವಿಸಿತ್ತು. ಈ ಸರಣಿ ಸಾವಿನ ನಂತರವೂ, ಮೃಗಾಲಯದಲ್ಲಿ ಈಗ ಇನ್ನುಳಿದ ಒಂಬತ್ತು ಕೃಷ್ಣಮೃಗಗಳಿಗೆ ಆರೈಕೆ ಮುಂದುವರೆದಿದೆ. ಮೃಗಾಲಯದ ಅಧಿಕಾರಿಗಳು ಈ ಸಾವುಗಳಿಗೆ ಕಾರಣವನ್ನು ಕಂಡುಹಿಡಿಯಲು ಮತ್ತು ಉಳಿದಿರುವ ಮೃಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ. ಅಳಿದುಳಿದ ಈ ಕೃಷ್ಣಮೃಗಗಳ ಪ್ರಾಣ ಉಳಿಸಲು ಪಶುವೈದ್ಯರ ತಂಡವು ತೀವ್ರ ನಿಗಾವಹಿಸಿ, ವಿಶೇಷ ಆರೈಕೆ ನೀಡುತ್ತಿದೆ.

Tags:

error: Content is protected !!