ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್–ಡಿಸೆಂಬರ್ ಕ್ರಾಂತಿ ಎಂಬುದು ಏನೂ ಇಲ್ಲ. ಕ್ರಾಂತಿ ಆಗುತ್ತದೋ, ಆಗುವುದಿಲ್ಲವೋ? ಏನೇ ಆದರೂ ಯಾರ ಕೈಯಲ್ಲೂ ಯಾವುದೇ ಅಧಿಕಾರ ಇಲ್ಲಾ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು. ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪಕ್ಷದ ಅಂತಿಮ ನಿರ್ಧಾರ ಹೈಕಮಾಂಡ್ ನದ್ದೇ ಎಂದು ತಿಳಿಸಿದ ಸಚಿವರು, ಸಿಎಂ, ಡಿಸಿಎಂ, ನಾನು—ಎಂ.ಬಿ. ಪಾಟೀಲ್, ಕಾರ್ಯಕರ್ತರು ಎಲ್ಲರೂ ಸೇರಿ ನೋಡಿದರೂ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಸ್ಪಷ್ಟನೆ ನೀಡಿದರು. ಮಲ್ಲಿಕಾರ್ಜುನ ಖರ್ಗೆ ನಮ್ಮ ಹೈಕಮಾಂಡ್. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇವರ ತೀರ್ಮಾನವೇ ಪಕ್ಷದ ಅಂತಿಮ ತೀರ್ಪು, ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯದಾದ್ಯಂತ ಹರಿದಾಡುತ್ತಿರುವ ಊಹಾಪೋಹ ಗಳಿಗೆ ಅವರು ಸ್ಪಷ್ಟನೆ ನೀಡಿದ್ದು, ನಿರ್ಧಾರ ಸಂಪೂರ್ಣವಾಗಿ ದೆಹಲಿಯ ಹೈಕಮಾಂಡ್‌ನದ್ದೇ ಎಂದು ಪುನರುಚ್ಚರಿಸಿದರು.

