

ಹುಕ್ಕೇರಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆ ಕಳೆದ ಎರಡು ವರ್ಷಗಳಿಂದ ವಿಳಂಬವಾಗಿದೆ ಎಂದು ದಲಿತ ಮುಖಂಡರು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ಹುಕ್ಕೇರಿಯಲ್ಲಿ ಜರುಗಿತು.
ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕಾ ಆಡಳಿತ ವತಿಯಿಂದ ಜರುಗಿದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೋರತೆ ಸಭೆಯಲ್ಲಿ ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಗಣ್ಯರನ್ನು ಸ್ವಾಗತಿಸಿ ಹಿಂದಿನ ಸಭೆಯ ನಡುವಳಿಕೆ ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೋರತೆ ಸಭೆ ಜರುಗಿಸದೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ತಮಗೆ ಇಷ್ಟ ಪ್ರಕಾರ ನಡೆದು ಕೋಳ್ಳುತ್ತಿದ್ದಾರೆ ಎಂದು ದಲಿತ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು .
ನಂತರ ತಹಸಿಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ ಈ ಹಿಂದೆ ಇದ್ದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಚುನಾವಣೆಗಳ ಕಾರಣದಿಂದ ಸಭೆ ಜರುಗಿಸಲು ವಿಳಂಬವಾಗಿದೆ ಮುಂಬರುವ ದಿನಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಸಭೆ ಜರುಗಿಸಲಾಗುವದು ಎಂದರು.
ವೇದಿಕೆ ಮೇಲೆ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧೀಕಾರಿ ಟಿ ಆರ್ ಮಲ್ಲಾಡದ,
ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ,ಸಿ ಡಿ ಪಿ ಓ ಹೋಳೆಪ್ಪಾ ಎಚ್, ಹಿಂದೂಳಿದ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ ಭಜಂತ್ರಿ, ಅರಣ್ಯ ಇಲಾಖೆ ಅಧಿಕಾರಿ ಬಿ ಎ ಸನದಿ, ಜಿಲ್ಲಾ ನಾಮ ನಿರ್ದೆಶನ ಸದಸ್ಯ ಕರೆಪ್ಪಾ ಗುಡೆನ್ನವರ ,ವಿಭಾಗಿಯ ಸದಸ್ಯ ರಮೇಶ ಹುಂಜಿ, ಉದಯ ಹುಕ್ಕೇರಿ, ಮಲ್ಲಿಕಾರ್ಜುನ ರಾಶಿಂಗೆ, ಬಸವರಾಜ ತಳವಾರ ಉಪಸ್ಥಿತರಿದ್ದರು.
ಸರ್ಕಾರದ ಯೋಜನೆಗಳು ಎಸ್ ಸಿ,ಎಸ್ ಟಿ ಫಲಾನುಭವಿಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯಗಳು ಸಿಗುತ್ತಿಲ್ಲಾ ಕಾರಣ ಎಲ್ಲ ಎ ಬ್ಯಾಂಕ ಅಧಿಕಾರಿಗಳಿಗೆ ಸೂಚನೆ ನಿಡುವಂತೆ ಆಗ್ರಹಿಸಿದರು,
ಸಮಾಜ ಕಲ್ಯಾಣ ಅಧಿಕಾರಿ ಗುರುಶಾಂತ ಪಾವಟೆ ಮಾತನಾಡಿ ಹೆಚ್ಚಿನ ದೂರಗಳು ಬ್ಯಾಂಕಿಗೆ ಸಂಭಂದಿಸಿದ್ದರಿಂದ ಪ್ರತ್ಯೇಕವಾಗಿ ಸಭೆ ಜರುಗಿಸಲಾಗುವದು ಎಂದು ವಿಷಯಕ್ಕೆ ತೇರೆ ಎಳೆದರು.
ದಲಿತ ಮುಖಂಡರಾದ ಪ್ರಕಾಶ ಮೈಲಾಖೆ, ದೀಲಿಪ ಹೋಸಮನಿ, ಶಶಿಕಾಂತ ಹೊನ್ನಳ್ಳಿ, ಕೆಂಪಣ್ಣಾ ಶಿರಹಟ್ಟಿ, ಬಹುಸಾಹೆಬ ಪಾಂಡ್ರೆ, ಶಾಂತವ್ವಾ ಹೆಲವಿ, ಸರೋಜಾ ಕಾಂಬಳೆ, ಆನಂದ ಪಾಟೀಲ ಮೊದಲಾದವರು ವಿವಿಧ ಇಲಾಖೆಗಳ ನ್ಯೂನ್ಯತೆ ಹಾಗೂ ದಲಿತರಿಗೆ ಸರ್ಕಾರದ ಯೋಜನೆಗಳು ಸಕಾಲದಲ್ಲಿ ದೊರೆಯುತ್ತಿಲ್ಲಾ ಎಂದು ಆರೋಪಿಸಿದರು.
ಗುಡಸ ಗ್ರಾಮದಲ್ಲಿ ಆಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ ಎಂದು ದಲಿತ ಮಹಿಳೆಯರು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಹುಕ್ಕೇರಿ ತಾಲೂಕಿನ ದಲಿತ ಮುಖಂಡರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

