
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸಹಯೋಗದಲ್ಲಿ ಡಾ. ಭವ್ಯ ಅಶೋಕ್ ಸಂಪಗಾರ್ ಅವರ ಪ್ರಥಮ ಕವನ ಸಂಕಲನ ನಾಳೆಗಳ ನೆಚ್ಚಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸಹಯೋಗದಲ್ಲಿ ಡಾ. ಭವ್ಯ ಅಶೋಕ್ ಸಂಪಗಾರ್ ಅವರ ಪ್ರಥಮ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿರಿಯ ಸಾಹಿತಿಗಳಾಡ ಪ್ರೋ. ಡಾ. ಬಸವರಾಜ್ ಜಗಜಂಪಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಬಸವರಾಜ್ ಗಾರ್ಗಿ, ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷರಾದ ಸುಮಾ ಕಿತ್ತೂರು, ಅಶೋಕ ಸಂಪಗಾರ್, ಬಿಮ್ಸ್ ಅಧಿಕಾರಿ ಸಿದ್ಧು ಹುಲ್ಲೋಳ್ಳಿ ಇನ್ನುಳಿದವರು ಉಪಸ್ಥಿತರಿದ್ಧರು.
ಮೊದಲಿಗೆ ಬೆಳಗಾವಿ ಲೇಖಕಿಯರ ಸಂಘದ ಕಾರ್ಯದರ್ಶಿಗಳಾದ ಆಶಾ ಯಮಕನಮರ್ಡಿ ಅವರು ನಾಳೆಗಳ ನೆಚ್ಚಿ ಪುಸ್ತಕದ ಪರಿಚಯ ಮಾಡಿಕೊಟ್ಟರು.
ಬಿಮ್ಸ್ ಅಧಿಕಾರಿ ಸಿದ್ಧು ಹುಲ್ಲೋಳ್ಳಿ ಅವರು ಮಾತನಾಡಿ ವೈದ್ಯ ಲೋಕದಲ್ಲಿದ್ದು, ಸಾಹಿತ್ಯ ಕೃಷಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕವನಗಳು ಜೀವನದಲ್ಲಿ ಮಾರ್ಗದರ್ಶಕ. ಸಾಹಿತ್ಯವೂ ಜೀವನಕ್ಕೆ ದಾರಿದೀಪವಾಗಿದೆ. ಕಥೆ-ಕವನಗಳು ಜೀವನವನ್ನು ಸುಂದರವಾಗಿಸುತ್ತವೆ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರೋ. ಡಾ. ಬಸವರಾಜ್ ಜಗಜಂಪಿ ಅವರು ಒಬ್ಬ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆಯ ಇರುತ್ತಾಳೆ ಎಂಬ ಮಾತಿದೆ. ಆ ಮಹಿಳೆ ಯಾಕೆ ಆ ಪುರುಷನ ಬೆನ್ನೆಲುಬಾಗಿರುತ್ತಾಳೆಂದರೇ, ಆತ ಎಲ್ಲಿಯಾದರೂ ತಪ್ಪಿದರೇ, ಅದನ್ನ ಸರಿಪಡಿಸಲು. ಅದರಂತೆ ಓರ್ವ ಯಶಸ್ವಿ ಮಹಿಳೆಯ ಹಿಂದೆ ಓರ್ವ ಪುರುಷ ಎಂಬಂತೆ ಅಶೋಕ ಸಂಪಗಾರ ಕೂಡ ಅವರ ಪತ್ನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.
ಈ ವೇಳೆ ಸಾಹಿತ್ಯಾಸ್ತಕರು ಮತ್ತು ಲೇಖಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

