Hukkeri

ಅಪಘಾತ ನಿಯಂತ್ರಣಕ್ಕೆ ಸಂಚಾರಿ ನಿಯಮಗಳನ್ನು ಪಾಲಿಸಿ – ಪಿ ಎಸ್ ಆಯ್ ಎಚ್ ಕೆ ಪಾಟೀಲ.

Share

ವಾಹನ ಚಾಲನೆ ವೇಳೆ ಸಂಚಾರಿ ನಿಯಮಗಳನ್ನು ಪಾಲಿಸಿದರೆ ರಸ್ತೆಗಳ ಮೇಲೆ ನಡೆಯುವ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ಹುಕ್ಕೇರಿ ಪೋಲಿಸ್ ಸಬ್ ಇನ್ಸಪೇಕ್ಟರ ಎಚ್ ಕೆ ಪಾಟೀಲ ಹೇಳಿದರು.
ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾದ ಹಿನ್ನಲೆಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ ಚಾಲಕರಿಗೆ ರಿಪ್ಲೇಕ್ಟರ ಅಳವಡಿಕೆ ಮತ್ತು ಸಚಾರಿ ನಿಯಮಗಳ ಪಾಲಿಸುವ ಕುರಿತು ಜಾಗ್ರತೆ ಮೂಡಿಸಿದರು.
ಹುಕ್ಕೇರಿ – ಘಟಪ್ರಭಾ ರಸ್ತೆ ಮೇಲೆ ಸಂಚರಿಸುವ ಕಬ್ಬು ತುಂಬಿದ ವಾಹನಗಳಿಗೆ ಹಿಂಬದಿಯಲ್ಲಿ ರಿಪಲೇಕ್ಟರ ಅಳವಡಿಕೆ , ವಾಹನಗಳ ದಾಖಲೆ ಮತ್ತು ರಸ್ತೆ ಸುರಕ್ಷತೆ ಕುರಿತು ಸಂಚಾರ ನಿಯಮಗಳ ಜಾಗೃತಿ ಮೂಡಿಸಿದರು.
ರಸ್ತೆಯಲ್ಲಿ ನಿಂತು ತಪ್ಪು ಮಾಡುವ ವಾಹನ ಚಾಲಕರಿಗೆ ಒಮ್ಮೆಲೆ ದಂಡ ಹಾಕುವ ಬದಲು, ಮೊದಲು ರಸ್ತೆ ಸುರಕ್ಷತೆ ಬಗ್ಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ನಂತರವೂ ತಪ್ಪು ಮಾಡುವುದು ಮುಂದುವರಿದಲ್ಲಿ, ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ಖಚಿತ ಎಂದು ವಾಹನ ಚಾಲಕರಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಿ ಎಸ್ ಆಯ್ ಎಚ್ ಕೆ ಪಾಟೀಲ, ಪ್ರೋಬೆಷನರಿ ಪಿ ಎಸ್ ಆಯ್ ರಾಜು ಗಸ್ತಿ, ಎ ಎಸ್ ಆಯ್ ಬಿ ಎಮ್ ರಿಜಕನವರ ಉಪಸ್ಥಿತರಿದ್ದರು.

Tags:

error: Content is protected !!