Uncategorized

ಹುಕ್ಕೇರಿ : ಮಧುಮೇಹ ನಿಯಂತ್ರಣ ಮಾಡುವದು ಅವಶ್ಯಕ – ಡಾ, ಬಸವರಾಜ ಹುಕ್ಕೇರಿ.

Share

ಆರಂಭಿಕ ಹಂತದಲ್ಲಿ ಮಧುಮೇಹ ನಿಯಂತ್ರಣ ಮಾಡುವದು ಅವಶ್ಯಕವಾಗಿದೆ ಎಂದು ಸಂಕೇಶ್ವರ ಶ್ರೀ ದುರದುಂಡಿಶ್ವರ ವಿದ್ಯಾವರ್ಧಕ ಸಂಘದ ಅಣ್ಣಪೂರ್ಣ ನರ್ಸಿಂಗ ಕಾಲೇಜ ಪ್ರಾಂಶುಪಾಲ ಡಾ, ಬಸವರಾಜ ಹುಕ್ಕೇರಿ ಹೇಳಿದರು.

ಸಂಕೇಶ್ವರ ನಗರದಲ್ಲಿ ಎಸ್‌ ಡಿ ವಿ ಎಸ್‌ ಸಂಘದ ಅನ್ನಪೂರ್ಣಾ ನರ್ಸಿಂಗ್‌ ಇನ್‌ಸ್ಟಿಟ್ಯೂಟ್‌ ಮತ್ತು ಸಾರ್ವಜನಿಕ ಆಸ್ಪತ್ರೆ ಸಂಕೇಶ್ವರ ಹಾಗೂ ಎನ್‌ ಸಿ ಡಿ ಘಟಕದ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಮಧುಮೇಹ ದಿನವನ್ನು ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸುವ ಮೂಲಕ ಆಚರಿಸಲಾಯಿತು.
ಪಟ್ಟಣದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ, ದತ್ತಾತ್ರೇಯ ದೊಡಮನಿ ಜಾಗೃತ ಜಾಥಾಕ್ಕೆ ಚಾಲನೆ ನೀಡಿದರು.
ಡಾ, ಪೂರ್ಣಿಮಾ ತಲ್ಲೂರ ಮಾತನಾಡಿ ಇತ್ತಿಚಿಗೆ ಮಧುಮೇಹ ಕಾಯಿಲೆಯ ಪ್ರಮಾಣ ಹೆಚ್ಚುತ್ತಿರುವದರಿಂದ ಕಾಯಲೆ ಬಗ್ಗೆ ಮುಂಜಾಗ್ರತೆ ಕ್ರಮ ಜರುಗಿಸುವದು ಅವಶ್ಯವಾಗಿದೆ ಕಾರಣ ನಾವು ಇಂದು ಅಣ್ಣಪೂರ್ಣ ನರ್ಸಿಂಗ ಕಾಲೇಜ ವಿದ್ಯಾರ್ಥಿಗಳ ಸಹಕಾರದಿಂದ ಜಾಗ್ರತೆ ಜಾಥಾ ದೊಂದಿಗೆ ಉಚಿತ ತಪಾಸಣೆ ಕೈಗೊಳ್ಳಲಾಗಿದೆ, ಮನಿಷ್ಯನಿಗೆ ಅರಿವಿಲ್ಲದಂತೆ ಮಧುಮೇಹ ಕಾಯಿಲೆ ಹೆಚ್ಚಾಗುತ್ತಿದೆ ಇದರಿಂದ ವಿವಿಧ ಅಗಾಂಗಗಳು ನಿಷ್ಕ್ರಿಯ ಗೊಳ್ಳುತ್ತವೆ ಕಾರಣ ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಪಡೆಯುವದು ಅವಶ್ಯವಾಗಿದೆ ಎಂದರು


ನರ್ಸಿಂಗ ಮಹಾವಿದ್ಯಾಲಯ ವಿದ್ಯಾರ್ಥಿಗಳು ಜಾಥಾ ಮೂಲಕ ಪಟ್ಟಣದ ಕಿತ್ತೂರ ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತ ಸೆರಿದಂತೆ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ಉಚಿತ ತಪಾಸಣೆ ಮಾಡಲಾಯಿತು.
ಎಸ್ ಡಿ ವಿ ಎಸ್ ನರ್ಸಿಂಗ ಕಾಲೇಜ ಪ್ರಾಂಶುಪಾಲ ಡಾ, ಬಸವರಾಜ ಹುಕ್ಕೇರಿ ಮಾತನಾಡಿ ವಿಶ್ವ ಮಧುಮೇಹ ದಿನ ಅಂಗವಾಗಿ ಇಂದು ಸಂಕೇಶ್ವರ ಸಮೂದಾಯ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ನರ್ಸಿಂಗ ಮಹಾವಿದ್ಯಾಲಯ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಕಾಯಿಲೆ ಕುರಿತು ಜಾಗ್ರತೆ ಮೂಡಿಸುವದು ಮತ್ತು ರಕ್ತ ತಪಾಸಣೆ ಮಾಡಿ ಮಧುಮೇಹ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದರು ( )
ಈ ಸಂದರ್ಭದಲ್ಲಿ ಡಾ, ಶ್ಯಾಮಲಾ ಪೂಜಾರಿ, ಉಪನ್ಯಾಸಕರಾದ ರೋಹಿಣಿ, ಶಿವರಾಜ, ಸಂಜನಾ , ಶಶಿಕಾಂತ ಹಾಗೂ ಎಸ್ ಡಿ ವಿ ಎಸ್ ನರ್ಸಿಂಗ ಮಹಾವಿದ್ಯಾಲಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸುಮಾರು ನೂರಕ್ಕಿಂತ ಹೆಚ್ಚು ಜನರಿಗೆ ತಪಾಸಣೆ ಮಾಡಲಾಯಿತು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!