Vijaypura

ಬ್ಯಾಂಕ್ ನೌಕರನಿಗೆ ಹನಿಟ್ರ್ತಾಪ್; ಪತ್ರಕರ್ತ ಎಂದು ಹೇಳಿಕೊಂಡ ವ್ಯಕ್ತಿ ಸೇರಿ ನಾಲ್ಕು ಜನರ ಮೇಲೆ ಕೇಸ್

Share

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ (ಬ್ಯಾಂಕ್ ಮ್ಯಾನೇಜರ್) ಪೊಲೀಸ ಠಾಣೆಯ ಮೆಟ್ಟಿಲೇರಿದ್ದಾನೆ. ಹನಿಟ್ರ್ಯಾಪ್ ನಡೆಸಿದ ತಾಯಿ ಮಗ ಹಾಗೂ ಯುಟ್ಯೂಬರ್ ಸೇರಿ ನಾಲ್ಕು ಜನರ ವಿರುದ್ದ ಪೊಲೀಸ್ ಪ್ರಕರಣ ದಾಖಲಾಗಿದೆ. ಈ ಕುರಿತು ಇಂಡಿ ಶಹರ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇಂಡಿ ಪಟ್ಟಣದ ಡಿ.ವೈ.ಎಸ.ಪಿ ಕಾರ್ಯಾಲಯದ ಪಕ್ಕದಲ್ಲಿರುವ ಪುಟ್‌ಪಾತ್ ರಸ್ತೆಯ ಮೇಲೆ ಎಳೆ ನೀರು ಮಾರುತ್ತಿದ್ದ ಮಹಿಳೆ ಸುವರ್ಣ ಗಂಡ ರಾಹುಲ್ ಹೊನಸೂರೆ, ಮಹಿಳೆಯ ಮಗ ಅಮುಲ್ ರಾಹುಲ್ ಹೊನಸೂರೆ, ಹಂಜಗಿ ಗ್ರಾಮದ ಮಹೇಶ ಬಗಲಿ ಹಾಗೂ ಪತ್ರಕರ್ತ ಎಂದು ಹೇಳಿಕೊಂಡ ವೃತ್ತಿಯಲ್ಲಿ ಹೋಮ್‌ಗಾರ್ಡ ಆಗಿರುವ ತೌಶಿಪ್ ಖರೋಶಿ ಎಂಬುವರು ವ್ಯಕ್ತಿಯೊಬ್ಬನನ್ನು ಫುಸಲಾಯಿಸಿ ದುರುದ್ದೇಶಕ್ಕಾಗಿ ಹನಿಟ್ರಾಪ್ ಖೆಡ್ಡಾಗೆ ಬೀಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Tags:

error: Content is protected !!