

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೆರೆದ ಮನೆ ವಿಶೇಷ ಅಭಿಯಾನದಡಿಯಲ್ಲಿ ಠಾಣೆಯ ದಿನಚರಿ ಸೇರಿದಂತೆ ಕಾನೂನು ಕುರಿತು ಜಾಗೃತಿ ಮಂಡಿಸಲಾಯಿತು.
ವೈ- ನಗರದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕರು ಹಾಗೂ ಮಕ್ಕಳು ಪೊಲೀಸ್ ಠಾಣೆಯ ಕಾರ್ಯದ ವ್ಯವಸ್ಥೆ ಹಾಗೂ ಅಪರಾಧ ಚಟುವಟಿಕೆಗಳ ಕುರಿತು ಪೊಲೀಸರು ವಿವರಿಸುವ ಮೂಲಕ ಕಾನೂನು ಜಾಗೃತಿ ಕೈಗೊಂಡರು. ಧಾರವಾಡ ಜೆ ಎಸ್ ಎಸ್ ಶಾಲಾ ಮಕ್ಕಳು ಶಿಕ್ಷಕರು ಈ ಜಾಗೃತಿ ಭಾಗಿಯಾಗಿ ಕಾನೂನು ಮಾಹಿತಿ ಪಡೆದುಕೊಂಡರು. ಅಪರಾಧ ಚಟುವಟಿಕೆಗಳು ಕಣ್ಣಿಗೆ ಬಿದ್ದಾಗ ಪ್ರಾಥಮಿಕವಾಗಿ ಏನ ಮಾಡ್ಬೇಕು ಎಂಬವುದರ ಕುರಿತು ಹಾಗೂ ಕಾನೂನು ಉಲ್ಲಂಘನೆ ಮಾಡಿದಲ್ಲಿ ಜೀವನದ ಮೇಲೆ ಏನೆಲ್ಲಾ ಪರಿಣಾಮಗಳು ಬೀಳುತ್ತವೆ ಅನ್ನೋದು ಕುರಿತು ಮಕ್ಕಳಿಗೆ ಠಾಣೆ ಅಧಿಕಾರಿಗಳು ತಿಳುವಳಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

