bagalkot

ಕಬ್ಬು ತುಂಬಿದ ಟ್ರಕ್ ಪಲ್ಟಿ ಮಾಡಿ ರೈತರ ಆಕ್ರೋಶ!!!

Share

ಬಾಗಲಕೋಟೆ ಜಿಲ್ಲೆಯ ಮುಧೋಳ ಭಾಗದಲ್ಲಿ ರೈತರ ಹೋರಾಟವು ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮಹಾಲಿಂಗಪುರ ರಸ್ತೆಯ ಹೊಸ ಬೈಪಾಸ್ ಬಳಿ ಕಬ್ಬು ತುಂಬಿದ ಟ್ರಕ್ ಅನ್ನು ಪಲ್ಟಿ ಮಾಡುವ ಮೂಲಕ ಹೋರಾಟಗಾರರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಭಾಗದಲ್ಲಿ ರೈತರ ಹೋರಾಟವು ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮಹಾಲಿಂಗಪುರ ರಸ್ತೆಯ ಹೊಸ ಬೈಪಾಸ್ ಬಳಿ ಕಬ್ಬು ತುಂಬಿದ ಟ್ರಕ್ ಪಲ್ಟಿ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು. ಕಬ್ಬು ಕಟಾವು ಮತ್ತು ಸಾಗಾಟ ಮಾಡಬಾರದು ಎಂದು ರೈತರು ಕಬ್ಬು ಹೋರಾಟಗಾರರ ಪರವಾಗಿ ಸ್ಪಷ್ಟ ಎಚ್ಚರಿಕೆ ನೀಡಿದ್ದರೂ, ಅದನ್ನು ಧಿಕ್ಕರಿಸಿ ಕಬ್ಬನ್ನು ಕಟಾವು ಮಾಡಿ ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ, ಇಂದು ಬೆಳಗಿನ ಜಾವ ಸಾಗುತ್ತಿದ್ದ ಟ್ರಕ್ ಅನ್ನು ರೈತರು ಅಡ್ಡಗಟ್ಟಿದ್ದಾರೆ. ಎಚ್ಚರಿಕೆಯ ಹೊರತಾಗಿಯೂ ಕಬ್ಬು ಸಾಗಾಟ ಮಾಡಿದಕ್ಕೆ ಆಕ್ರೋಶಗೊಂಡ ರೈತರು ರಸ್ತೆ ಬದಿಯಲ್ಲಿ ಟ್ರಕ್ ಪಲ್ಟಿ ಮಾಡಿ ಪ್ರತಿಭಟನೆ ನಡೆಸಿದರು.

ರೈತರ ಹೋರಾಟದಿಂದಾಗಿ ಸದ್ಯ ಮುಧೋಳ ಭಾಗದಲ್ಲಿ ಬೂದಿ ಮುಚ್ಚಿದ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಕಬ್ಬು ಹೋರಾಟಗಾರರ ಎಚ್ಚರಿಕೆಯ ಹೊರತಾಗಿಯೂ ಕಬ್ಬು ಸಾಗಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ರೈತರು ಒತ್ತಾಯಿಸಿದ್ದಾರೆ.

Tags:

error: Content is protected !!