Dharwad

ಧಾರವಾಡ ಜಿಲ್ಲೆಯ ಎಲ್ಲ ಠಾಣೆಗಳಲ್ಲೂ ರೌಡಿ ಪರೇಡ್ ನಡೆಸಿದ್ದೇವೆ”: ಎಸ್‌ಪಿ ಗುಂಜನ್ ಆರ್ಯ

Share

ಧಾರವಾಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿಗಳ ಪರೇಡ್ ನಡೆಸಿದ್ದೇವೆ. ಅವರ ಪ್ರತಿನಿತ್ಯದ ಕೆಲಸ ಏನು? ಸದ್ಯ ಅವರು ಏನು ಮಾಡುತ್ತಿದ್ದಾರೆ ಎಂಬೆಲ್ಲ ಅಂಶಗಳನ್ನು ತಿಳಿದುಕೊಳ್ಳುವುದಕ್ಕೋಸ್ಕರ ಆಗಾಗ ಈ ರೀತಿ ರೌಡಿ ಶೀಟರ್‌ಗಳನ್ನು ಕರೆದು ಪರೇಡ್ ನಡೆಸಲಾಗುತ್ತಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹೇಳಿದರು.

V ಧಾರವಾಡದಲ್ಲಿ ಮಾತನಾಡಿದ ಅವರು, ಧಾರವಾಡ ಗ್ರಾಮೀಣ, ಗರಗ, ಅಳ್ನಾವರ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಇತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರೌಡಿಗಳನ್ನು ಕರೆಯಿಸಿ ಅವರ ನಿತ್ಯದ ಕೆಲಸ ಬಗ್ಗೆ ಮಾಹಿತಿ ಪಡೆಯಲಾಗಿದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡವರಿಗೆ ತಾಕೀತು ಸಹ ಮಾಡಲಾಗಿದೆ ಎಂದರು.

Tags:

error: Content is protected !!