Hukkeri

ಪತ್ರಕರ್ತರಿಗೆ ವಿಮಾ ಸೌಲಭ್ಯ ವದಗಿಸಲಾಗುವದು – ಅದ್ಯಕ್ಷ ಭೀಮಶಿ ಜಾರಕಿಹೋಳಿ.

Share

ಪತ್ರಕರ್ತರಿಗೆ ವಿಮಾ ಸೌಲಭ್ಯ ವದಗಿಸುವದು ನಮ್ಮ ಮೊದಲ ಆಯ್ಕೆಯಾಗಿದೆ ಎಂದು ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅದ್ಯಕ್ಷ ಡಾ, ಭೀಮಶಿ ಜಾರಕಿಹೋಳಿ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025 ರಿಂದ 2028 ಸಾಲಿನ ಬೆಳಗಾವಿ ಜಿಲ್ಲಾ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೊಧವಾಗಿ ಆಯ್ಕೆಯಾದ ಜಿಲ್ಲಾ ಸಮಿತಿ ಸದಸ್ಯರಿಗೆ ಚುನಾವಣಾ ಅಧಿಕಾರಿ ಗುರುಸಿದ್ದಪ್ಪ ಪೂಜೇರಿ ಪ್ರಮಾಣ ಪತ್ರ ವಿತರಣೆ ಮಾಡಿದರು.
ಬೆಳಗಾವಿ ಜಿಲ್ಲಾ ಅದ್ಯಕ್ಷರಾಗಿ ಡಾ, ಭೀಮಶಿ ಜಾರಕಿಹೋಳಿ, ಉಪಾದ್ಯಕ್ಷರಾಗಿ ಕುಂತಿನಾಥ ಕಲಮನಿ, ತಾನಾಜಿ ಮುರಮಕರ, ಭೀಮಪ್ಪಾ ಖಿಚಡಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ, ಕಾರ್ಯದರ್ಶಿಯಾಗಿ ಸದಾಶಿವ ಸಂಕಪ್ಪಗೋಳ, ರವಿ ಹುಲಕುಂದ ಮತ್ತು ರಾಜಕುಮಾರ ಬಾಗಲಕೋಟಿ ಮತ್ತು ಕಾರ್ಯಕಾರಣಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೇದಿಕೆ ಮೇಲೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ಕಾರ್ಯಕಾರಣಿ ಸದಸ್ಯ ಮಲ್ಲಿಕಾರ್ಜುನ ಗೊಂದಿ ಉಪಸ್ಥಿತರಿದ್ದರು.
ನೂತನ ಅದ್ಯಕ್ಷ ಡಾ, ಭೀಮಶಿ ಜಾರಕಿಹೋಳಿ ಮಾತಮಾಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಘಟಕದ ನೂತನ ಅದ್ಯಕ್ಷ ಸ್ಥಾನ ಪಡೆದ ನಮಗೆ ಬಹಳಷ್ಟು ಜವಾಬ್ದಾರಿಗಳು ಇವೆ ಈ ಹಿಂದೆ ಕಾರ್ಯ ನಿರ್ವಹಿಸಿದ ಪದಾದಿಕಾರಿಗಳ ಸಹಕಾರ ಮತ್ತು ನಿಮ್ಮೆಲ್ಲರ ಶ್ರಮದಿಂದ ಜಿಲ್ಲೆಯಲ್ಲಿ ಪತ್ರಿಕಾ ಭವನ ಹಾಗೂ ಸಂಘದ ಸದಸ್ಯರಿಗೆ ವಿಮಾ ಸೌಲಭ್ಯ ವದಗಿಸಲು ಮೊದಲ ಆದ್ಯತೆ ನೀಡಲಾಗುವದು ಎಂದರು
ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ ಮಾತನಾಡಿ ಡಾ, ಭಿಮಶಿ ಜಾರಕಿಹೋಳಿ ಆಶಿರ್ವಾದದಿಂದ ನಾನು ರಾಜ್ಯ ಮಟ್ಟದಲ್ಲಿ ಎರಡನೆ ಬಾರಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿದೆ ಅದೆ ರೀತಿ ತಮಗೂ ಸಿಕ್ಕಂತ ಅವಕಾಶದಲ್ಲಿ ಸಾಹುಕಾರರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಿ ಮಾಡೋಣ ಇದಕ್ಕೆ ರಾಜ್ಯ ಸಮಿತಿಯಿಂದ ಎಲ್ಲ ರೀತಿಯ ಸಹಕಾರ ನಿಡಲಾಗುವದು ಎಂದರು
ನಂತರ ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ಜಿಲ್ಲಾ ಕಾರ್ಯಕಾರಣಿವಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ನೀಡಿಲಾಯಿತು.
ಜಿಲ್ಲಾ ಸಮಿತಿ ವತಿಯಿಂದ ಚುನಾವಣಾ ಅಧಿಕಾರಿ ಗುರುಸಿದ್ದಪ್ಪ ಪೂಜೇರಿ ಮತ್ತು ನೂತನ ಅದ್ಯಕ್ಷ ಡಾ, ಭೀಮಶಿ ಜಾರಕಿಹೋಳಿ ಹಾಗೂ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ ಯವರಿಗೆ ಸತ್ಕರಿಸಿ ಅಭಿನಂದಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಕುಂತಿನಾಥ ಕಲಮನಿ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ ಮಾತನಾಡಿ ಜಾರಕಿಹೋಳಿ ಸಾಹುಕಾರ ನೀಡಿದ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಸದಸ್ಯರ ಹಿತ ಕಾಪಾಡಲು ಶ್ರಮಿಸಲಾಗುವದು ಹಾಗೂ ಪತ್ರಿಕಾ ಭವನ ನಿರ್ಮಿಸಲು ಪ್ರಥಮ ಆದ್ಯತೆ ನಿಡಲಾಗುವದು ಎಂದರು
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ನೂತನ ಕಾರ್ಯಕಾರಣಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!