Belagavi

ರೈತನ ಬೇಡಿಕೆ ಒಪ್ಪಲೇಬೇಕು. ಅಂಕಲಗಿ ಮಠದ ಅಮರಸಿದ್ಧೇಶ್ವರ ಶ್ರೀ ಆಗ್ರಹ. ಲಗಮೇಶ್ವರ ಕ್ರಾಸ್ ನಲ್ಲಿ ರಸ್ತೆ ತಡೆ ಒಡ್ಡಿ ರೈತರ ಆಕ್ರೋಶ

Share

ಸರ್ಕಾರ ಕೊಡಲೇಬೇಕು. ಗೊಬ್ಬರ, ಅಳು,ಹೋಳು ಸಹಿತ ಕೃಷಿಗಾರಿಕೆ ನಿರ್ವಹಣೆಯು ತೀರಾ ಸಂಕಷ್ಟಗಳ ಸುರಿಮಳೆಯಲ್ಲಿದ್ದು, ರೈತನ ಬದುಕು ಬೀದಿಗೆ ಬಂದಿದ್ದು, ಕಬ್ಬಿಗೆ ಬೇಡಿದ ಈ ಬೆಲೆ ತಕ್ಷಣ ರಾಜ್ಯ ಮತ್ತು ಕೆಂದ್ರ ಸರ್ಕಾರ ಮನ್ನಿಸಿ ೩೫೦೦ ಬೆಲೆ ಘೋಷಣೆ ಮಾಡಿ ಮುಂದಾಗುವ ಅನಾಹುತಗಳಿಗೆ ತೆರೆ ಎಳೆಯಬೇಕು ಎಂದು ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.

ಅವರು ಗುರುವಾರ ಅಂಕಲಗಿ ಸಮೀಪದ ಲಗಮೇಶ್ವರ ಕ್ರಾಸ್ ನಲ್ಲಿ ಜರುಗಿದ ಬ್ರಹತ್ ರೈತರ ರಸ್ತೆ ತಡೆ ಚಳುವಳಿ ಯಲ್ಲಿ ಪಾಲ್ಗೊಂಡು ರೈತರನ್ನು ಮತ್ತು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದರು.
ರೈತ ಸಂತಸದಿಂದಿರುವ ನಾಡು ಸ್ವರ್ಗ ಸಮ. ರೈತನ ಬದುಕು ಸುಖ ಸಂತೋಷ ಕಾಣಬೇಕು ಅದಕ್ಕೆ ಜಿಲ್ಲೆ ಮತ್ತು ರಾಜ್ಯದ ಶಾಸಕರು ,ಸಚಿವರು ಮತ್ತು ಆಡಳಿತ ವರ್ಗ ಸ್ಪಂದಿಸಬೇಕು. ರೈತ ಬೆಳೆಯುವ ಕಬ್ಬು ಅಷ್ಟೇ ಅಲ್ಲ, ಎಲ್ಲ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಪರಸ್ಥಿತಿ ಶಾಂತಗೊಳಿಸಬೇಕು ಎಂದರು.

ದುರೀಣರಾದ ಭೀಮಗೌಡಾ ಪೊಲೀಸಗೌಡರ, ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ಡಾ ಮಹಾಂತೇಶ ಕಡಾಡಿ, ಅನ್ನಪೂರ್ಣ ನಿರ್ವಾಣಿ, ವಜೀರ ಬೊಂಬರಗಿ, ಚಿನ್ನಯ್ಯಾಸ್ವಾಮಿ ಹಿರೇಮಠ, ಆನಂದ ಅತ್ತುಗೋಳ, ಕಲ್ಲಪ್ಪ ಹೆಬ್ಬಾಳ, ರಾಜೇಂದ್ರ ಗೌಡಪ್ಪಗೋಳ ಇನ್ನುಳಿದವರು ಭಾಗಿಯಾಗಿದ್ಧರು

Tags:

error: Content is protected !!