BELAGAVI

ಮಹಾರಾಷ್ಟ್ರ, ಗುಜರಾತ್ ಮತ್ತು ಪಂಜಾಬ್ ಮಾದರಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡಿ

Share

ಮಹಾರಾಷ್ಟ್ರ, ಗುಜರಾತ್ ಮತ್ತು ಪಂಜಾಬ್ ಮಾದರಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡಬೇಕೆಂದು ನೇಗಿಲಯೋಗಿ ರೈತ ಸಂಘವು ಆಗ್ರಹಿಸಿದೆ.

ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ನೇಗಿಲಯೋಗಿ ರೈತ ಸಂಘವು ಪ್ರತಿಭಟನೆಯನ್ನು ನಡೆಸಿ, ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಮಹಾರಾಷ್ಟ್ರ, ಗುಜರಾತ್ ಮತ್ತು ಪಂಜಾಬ್ ಮಾದರಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡಬೇಕೆಂದು ನಿರಂತರವಾಗಿ ಪ್ರತಿಭಟಿಸಲಾಗುತ್ತಿದೆ. ಆದರೇ, ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ. ಅಲ್ಲದೇ ಹೆಸರು ಮತ್ತು ಸೋಯಾಬೀನ ಬೆಳೆ ಹಾಳಾಗಿದೆ. ಎನ್.ಡಿ.ಆರ್.ಎಫ್ ತಂಡ ಬೆಳೆ ಸಮೀಕ್ಷೆ ನಡೆಸಿ 2 ತಿಂಗಳು ಕಳೆದರೂ, ಪರಿಹಾರ ನೀಡಿಲ್ಲ. ಉಳಿದ ಬೆಳೆಯಾದ ಕಬ್ಬಿಗೂ 3500 ಸಾವಿರ ಪ್ರತಿಟನ್’ಗೆ ನೀಡಬೇಕು. ರೈತರಿಂದ ಆಯ್ಕೆಯಾದ ಜನಪ್ರತಿನಿಧಿಗಳು ರೈತರ ಕುಲದ ಕರೆಗೆ ಓಗೋಡುತ್ತಿಲ್ಲ. ರೈತ ಕುಲವನ್ನು ಕಡೆಗಣಿಸುವ ಕೆಲಸವನ್ನು ಪಿಎಂ ಮೋದಿ ಕೂಡ ಮಾಡುತ್ತಿದ್ದಾರೆ. ಎಫ್.ಆರ್.ಪಿ ದರ ಸಂಪೂರ್ಣವಾಗಿ ಮೋಸದಿಂದ ಕೂಡಿದೆ. 4500 ರೂಪಾಯಿ ಪ್ರತಿ ಟನ್ ಕಬ್ಬಿನ ದರ ನೀಡಲೇಬೇಕೆಂದು ನೇಗಿಲಯೋಗಿ ರೈತ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜುಟ್ಟನ್ನವರ, ಶಂಕರ ಬೋಳಣ್ಣವರ, ಮನೋಹರ ಸುಳೇಭಾವಿಕರ ಸೇರಿದಂತೆ ಇನ್ನುಳಿದ ರೈತರು ಭಾಗಿಯಾಗಿದ್ಧರು.

Tags:

error: Content is protected !!