ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಪಟೇಲ್ ಗಲ್ಲಿಯ ರಹಿವಾಸಿ ಸಾಮಾಜೀಕ ಕಾರ್ಯಕರ್ತ ಫಯಾಝ್ ಅಹ್ಮದ್ ಪಟೇಲ್ (46) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ತಾಯಿ, ಸಹೋದರರು, ಸಹೋದರಿ, ಪತ್ನಿ,ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ತಮ್ಮ ಸಾಮಾಜೀಕ ಕಾರ್ಯಗಳಿಂದ ಚಿರಪರಿಚಿತರಾಗಿದ್ದರು. ಮೃತರು ಪಟ್ಟಣ ಪಂಚಾಯಿತಿ ಸದಸ್ಯ ಸಮೀರ್ ಪಟೇಲ್ ಅವರ ಸಹೋದರರಾಗಿದ್ದರು.
