


ಬೆಳಗಾವಿ, ಅ.25(ಕರ್ನಾಟಕ ವಾರ್ತೆ): ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪದ್ಮಾವತಿ ಅವರು ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಶುಕ್ರವಾರ(ಅ.24) ಭೇಟಿ ನೀಡಿ ನಿಗಮದ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣ ಮಳಿಗೆಗಳನ್ನು ಪರಿಶೀಲಿಸಿದರು.
ಮಳಿಗೆಗಳ ಹಂಚಿಕೆ ಕುರಿತು ದೇವಸ್ಥಾನದ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಉದ್ಯೋಗಿನಿ ಯೋಜನೆಯ ಫಲಾನುಭವಿಗಳ ಘಟಕಕ್ಕೆ ಭೇಟಿ ಡಿ. ಆರ್. ಪಿ ಸರ್ವೇ ಪರಿಶೀಲಿಸಿದರು.
ತದನಂತರ ಹಾಗೂ ಮಾಜಿ ದೇವದಾಸಿ ಮಹಿಳೆಯರ ಜತೆ ಸಮಾಲೋಚನೆ ನಡೆಸಿ, ಸ್ಚಾವಲಂಬಿ ಬದುಕು ಕಟ್ಟಿಕೊಳ್ಳುವ ಕುರಿತು ಸಲಹೆಗಳನ್ನು ನೀಡಿದರು.
ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಅಕ್ಕಮಹಾದೇವಿ, ಸವದತ್ತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮೃತ ಸಾಣಿಕೊಪ್ಪ, ಸಹಾಯಕರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಿರೇಮಠ, ಯಲ್ಲಮ್ಮ ಗುಡ್ಡ ಪ್ರಾಧಿಕಾರದ ಅಭಿಯಂತರ ಚೌಹಾಣ, ಅಭಿವೃದ್ಧಿ ನಿರೀಕ್ಷರಾದ ರೂಪಾ ಪವಾರ ದೇವದಾಸಿ ಪುನರ್ವಸತಿ ಯೋಜನಾಧಿಕಾರಿಗಳು ಪುಷ್ಪಾ ಶಹಮಾನೆ, ಟಿ. ಜಿ. ಕಮ್ಯುನಿಟಿ ಟಿ. ಎಚ್. ಓ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

