Belagavi

ಗಡಿನಾಡು ಕನ್ನಡಿಗರ ಸೇನೆಯ ರಾಜ್ಯ ಘಟಕದ ಉದ್ಘಾಟನೆ

Share
ಬೆಳಗಾವಿ-೨೩-ಬೆಳಗಾವಿ ಸುವರ್ಣ ಸೌಧದಲ್ಲಿ ಗಡಿ ಸಂರಕ್ಷಣಾ ಆಯೋಗ ಮತ್ತು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ಸ್ಥಾಪನೆ ಹಾಗೂ ಸರಕಾರದ ೭ ಕೋಟಿ ರೂ.ಗಳ ಅನುದಾನದಲ್ಲಿ ಬೆಳಗಾವಿಯ ನೆಹರೂ ನಗರದಲ್ಲಿ ನಿರ್ಮಿಸಿದ ಕನ್ನಡ ಭವನವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ನಿರ್ವಹಣಾ ಸಮಿತಿಯ ವಶಕ್ಕೆ ಒಪ್ಪಿಸುವ ಸಂಬAಧ ಗಡಿನಾಡು ಕನ್ನಡಿಗರ ಸೇನೆಯು ತೀವ್ರವಾದ ಹೋರಾಟ ನಡೆಸಲಿದೆಯೆಂದು ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನೆಟ್ಟಿ ಅವರು ಇಂದು ಘೋಷಿಸಿದರು.
ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಮುಂಜಾನೆ ನಡೆದ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗಡಿ ಹಾಗೂ ನಾಡು, ನುಡಿಯ ಹೆಸರಿನಲ್ಲಿ ನಿರ್ಮಿಸಲಾದ ಕನ್ನಡ ಭವನವು ಆರ್ಥಿಕವಾಗಿ ದುರ್ಬಲವಾರುವ ಸಮುದಾಯಗಳಿಗೂ ಸಹ ಅತ್ಯಲ್ಪ ಕಡಿಮೆ ಬಾಡಿಗೆ ದರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಲಭಿಸುವಂತಾಗಬೇಕು. ಖಾಸಗಿ ಸಂಘವೊAದು ಕನ್ನಡ ಭವನವನ್ನು ಅಕ್ರಮವಾಗಿ, ಕಾನೂನು ಬಾಹಿರವಾಗಿ ನಿರ್ವಹಿಸುತ್ತಿದೆ. ೧೫ ರಿಂದ ೨೦ ಸಾವಿರವರಗೆ ಬಾಡಿಗೆ ಪಡೆಯುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರಡಿಸಿದ ಏಕರೂಪ ಬಾಡಿಗೆ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಮ್ಮತಿಯಿಂದಲೇ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಆದೇಶ ಹೊರಡಿಸಿದ ನಂತರ ಬೆಳಗಾವಿ ಜಿಲ್ಲಾಧಿಕಾರಿಗಳು ಕಳೆದ ಜೂನ್ ೨೪ ರಂದು ತಮ್ಮ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿಯನ್ನು ರಚಿಸಿದ್ದಾರೆ. ಆದರೆ ೫ ತಿಂಗಳಾದರೂ ಕನ್ನಡ ಭವನವನ್ನು ನಿರ್ವಹಣಾ ಸಮಿತಿಯ ವಶಕ್ಕೆ ತೆಗೆದುಕೊಂಡಿಲ್ಲ. ನವ್ಹೆಂಬರ ಒಂದರೊಳಗೆ ವಶಕ್ಕೆ ಪಡೆದುಕೊಳ್ಳಬೇಕು. ಇಲ್ಲವಾದರೆ ಉಗ್ರವಾದ ಹೋರಾಟವನ್ನು ಆರಂಭಿಸಲಾಗುವದು ಎಂದು ಪ್ರಕಟಿಸಿದರು.
ಈ ಸಂಬAಧ ಗಡಿ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರನ್ನು ಅಕ್ಟೋಬರ್ ೧೮ ರಂದು ಭೆಟ್ಟಿಯಾಗಿ ಮನವಿಯನ್ನು ಸಲ್ಲಿಸಲಾಗಿದೆಯೆಂದು ಬಲರಾಮ ಮಾಸೇನಟ್ಟಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ ಅವರು ಮಾತನಾಡಿ, “ಕನ್ನಡ ನಾಡು, ನುಡಿ, ಗಡಿ, ಜಲಗಳಿಗೆ ಸಂಬAಧಿಸಿದAತೆ  ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ನಾಡಿನಾದ್ಯಂತ ನೂರಾರು ಸಂಘಟನೆಗಳಿದ್ದರೂ ಇಂದು ಬೆಳಗಾವಿಯಲ್ಲಿ ಗಡಿನಾಡು ಕನ್ನಡಿಗರ ಸೇನೆ ಎಂಬ ಹೆಸರಿನಲ್ಲಿ ನೂತನವಾಗಿ ರಾಜ್ಯ ಘಟಕ ಉದ್ಘಾಟನೆಯಾಗಿದ್ದು ಸ್ವಾಗತಾರ್ಹ. ಈ ಮೂಲಕ ಇಂದಿನ ಹೊಸ ಪೀಳಿಗೆ ಕನ್ನಡ ಹೋರಾಟಕ್ಕೆ ತಮ್ಮ ಆಸಕ್ತಿ ಮತ್ತು ಬದ್ಧತೆಯನ್ನು ತೋರಿಸಿದಂತಾಗುತ್ತಿದೆ. ಕರ್ನಾಟಕ ಏಕೀಕರಣ ಹೋರಾಟದಿಂದ ಹಿಡಿದು ಇಲ್ಲಿಯವರೆಗೆ ನಾಲ್ಕೆöÊದು ತಲೆಮಾರುಗಳು ಕನ್ನಡ ಹೋರಾಟಕ್ಕೆ ಕೈಜೋಡಿಸಿವೆ. ಇಂದಿನ ಪೀಳಿಗೆ ಕನ್ನಡ ನಾಡಿನ ಇತಿಹಾಸವನ್ನು ತಿಳಿದುಕೊಂಡು ಯಾರೊಂದಿಗೂ ದ್ವೇಷ ಸಾಧಿಸದೆ ಯಾರದೋ ಕೈಗೊಂಬೆಯಾಗದೆ ಸಮಾಜ ಮುಖಿಯಾಗಿ ಕಟ್ಟಕಡೆಯ ಕನ್ನಡಿಗನಿಗೂ ನ್ಯಾಯ ಸಿಗುವಂತೆ ಹೊರಾಟ ರೂಪಿಸಬೇಕು. ಹೋರಾಟ ಒಂದು ಪ್ರವೃತ್ತಿಯಾಗಿ ಮಾಡಿಕೊಂಡು ತಮ್ಮ ಜೀವನೋಪಾಯಕ್ಕಾಗಿ ನಿಗದಿತ ವೃತ್ತಿಯಲ್ಲಿ ತೊಡಗಿಕೊಂಡು ಯುವಕರು ಈ ಸೇನೆಯನ್ನು ಬೆಳಿಸುವಂತಾಗಲಿ ಅವರೊಂದಿಗೆ ನಮ್ಮಂತಹ ಹೋರಾಟಗಾರರು ಸದಾ ಇರುತ್ತೇವೆ” ಎಂದು ಹೇಳಿದರು.
ಸಾನಿದ್ಯ ವಹಿಸಿದ್ದ ಬೆಳಗಾವಿಯ ಪ್ರಣವಂ ಫೌಂಡೇಶನ್ ಗುರುಕುಲದ ಶ್ರೀ ನಿಶ್ಚಲ ಸ್ವರೂಪ ಮಹಾಸ್ವಾಮಿಗಳು ಮಾತನಾಡಿ, “ಇಂದು ನಮ್ಮ ನೆಲದಲ್ಲೆ ನಿಂತು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಸಂಧಿಗ್ಧ ಸ್ಥಿತಿಯಲ್ಲಿ ಇಂದಿನ ಸಮಾಜ ನಿಂತಿದೆ. ಅದರಲ್ಲೂ ಇಂದಿನ ಯುವ ಸಮುದಾಯ ರಾಜಕೀಯ ಪ್ರೇರಿತ ಕಪಿಮುಷ್ಠಿಯಲ್ಲಿ ಸಿಲುಕಿ ತಮ್ಮ ಬದುಕಿಗೆ ತಾವೇ ಕೊಡಲಿಯೆಟು ಹಾಕಿಕೊಳ್ಳುತ್ತಿದ್ದಾರೆ. ಹೀಗಾಗಿ ಹಿರಿಯರ ಮಾರ್ಗದರ್ಶನ ಪಡೆದು ಸಮಾಜ ಮುಖಿಯಾಗಿ ಚಿಂತನೆ ಮಾಡಿ ಅಸಹಾಯಕ ಸ್ಥಿತಿಯಲ್ಲಿರುವ ಸಮುದಾಯಗಳಿಗೆ ನ್ಯಾಯ ಒದಗಿಸಲು ಹೋರಾಟ ರೂಪಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಗಡಿನಾಡು ಕನ್ನಡಿಗರ ಸೇನೆಯ ಮುಖಾಂತರ ಯುವ ಪಡೆ ಸೂಕ್ತ ರೀತಿಯಲ್ಲಿ ಹೋರಾಟ ಮಾಡುವ ಉದ್ದೇಶದಿಂದ ರಾಜ್ಯ ಮಟ್ಟದ ಸಂಘಟನೆ ಮಾಡುತ್ತಿರುವದು ಅನುಕರಣೀಯ. ತಮ್ಮ ಸ್ವಂತ ಬದುಕನ್ನು ಬಲಿಕೊಡದೇ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡರೆ ಇಂತಹ ಸಂಘಟನೆಗಳಿಗೆಹೆಚ್ಚಿನ ಜನರ ಸಹಕಾರ ದೊರೆಯುತ್ತದೆ. ಆ ನಿಟ್ಟಿನಲ್ಲಿ ಗಡಿನಾಡು ಕನ್ನಡಿಗರ ಸೇನೆ ಬೆಳಗಾವಿ ಗಡಿಯಿಂದ ಹೊರಾಟ ಆರಂಭಿಸಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ” ಎಂದು ಹಾರೈಸಿದರು.
ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಬಡಿಗೇರ, ಮಾಜಿ ತಾಲೂಕಾ ಪಂಚಾಯತ ಸದಸ್ಯ ರಾಮಣ್ಣ ಗುಳ್ಳಿ, ವಂದನಾ ಹೊರಕೇರಿ, ಮಹಾದೇವಿ ಅಗಸಿಬಾಗಿಲು, ಶೈಲಾ ರಾಯ್ಕರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕು. ಶ್ರದ್ಧಾ ಆರ್. ಉಪ್ಪಾರ ಭರತನಾಟ್ಯ ಮಾಡಿದರು. ನೂತನ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಹಾಗೂ ಅವರನ್ನು ಬಸವರಾಜ ಕೋರಿಕೊಪ್ಪ ಎಸ್.ಎಸ್. ಮೂಕನವರ, ಬಾಬು ಪಠಾಣ ಶಾಲು ಹೊದಿಸಿ ಸತ್ಕಾರ ಮಾಡಿ ಗೌರವಿಸಿದರು. ಭರತ ಪಿಪರೆ ಅವರನ್ನು ಸೇನೆಯ ವತಿಯಿಂದ ಶಾಲು ಹೊದಿಸಿ ಸತ್ಕಾರ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆನಂದ ಬಿಲಾವರ, ಪ್ರಭು ಗಸ್ತಿ, ಸಂತೋಷ ಮಾಸೇನಟ್ಟಿ, ಪ್ರಕಾಶ ಚಿಪ್ಪಲಕಟ್ಟಿ ನಾಗಪ್ಪ ನಾಯಕ, ಆನಂದ ತಳವಾರ, ಶಂಕರ ಕಾಂಬಳೆ, ದತ್ತಾ ಬಿಲಾವರ ಮುಂತಾದವರು ಭಾಗವಹಿಸದ್ದರು.
ಚಿತ್ರದುರ್ಗದ ಖ್ಯಾತ ಗಾಯಕರಾದ ಮೂರಾರ್ಜಿ ಅವರು ಹಾಡಿದ ನಾಡ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕನ್ನಡ ಹೋರಾಟಗಾರ ಶಂಕರ ಬಾಗೇವಾಡಿ ನಿರ್ವವಹಿಸಿದರು ಬೆಳಗಾವಿಯ ಪತ್ರಕರ್ತ ಭಗವಾನ ವಂದಿಸಿದರು.

Tags:

error: Content is protected !!