ಲಕ್ಷ್ಮೀಬಾಯಿ ಜಯವಂತ ಕೊಂಡೂಸ್ಕರ್ ಪ್ರತಿಷ್ಠಾನನ ವತಿಯಿಂದ ವೈಕುಂಠಧಾಮ ರಥ ಸೇವೆಯನ್ನು ಆರಂಭಿಸಲಾಗಿದ್ದು, ಇಂದು ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಬೆಳಗಾವಿಯ ಲಕ್ಷ್ಮೀಬಾಯಿ ಜಯವಂತ ಕೊಂಡೂಸ್ಕರ್ ಪ್ರತಿಷ್ಠಾನನ ವತಿಯಿಂದ ರಮಾಕಾಂತ್ ಕೊಂಡೂಸ್ಕರ್ ಅವರ ನೇತೃತ್ವದಲ್ಲಿ ವೈಕುಂಠಧಾಮ ರಥ ಸೇವೆಯನ್ನು ಆರಂಭಿಸಲಾಗಿದ್ದು, ಇಂದು ಬೆಳಗಾವಿಯ ದಕ್ಷಿಣಕಾಶಿ ಶ್ರೀ ಕ್ಷೇತ್ರ ಕಪಿಲೇಶ್ವರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮರಾಠಾ ಸಮಾಜದ ಶ್ರೀ ಹರಿಗುರು ಮಹಾರಾಜರ ಹಸ್ತದಿಂದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹರಿಗುರು ಮಹಾರಾಜರು ಕೊಂಡೂಸ್ಕರ್ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೇ, ವೈಕುಂಠಧಾಮ ರಥವು, ನಶ್ವರ ಶರೀರವನ್ನು ಭೈರವನ ಸ್ಮಶಾನದ ವರೆಗೆ ತಲುಪಿಸುವ ನಂದಿಯಂತೆ ಕಾರ್ಯ ನಿರ್ವಹಿಸಲಿ ಎಂದು ತಮ್ಮ ಮಾರ್ಗದರ್ಶನ ನೀಡಿದರು.
ಇನ್ನು ಕಪಿಲೇಶ್ವರ ದೇವಸ್ಥಾನ ಟ್ರಸ್ಟನ ವತಿಯಿಂದ ರಮಾಕಾಂತ್ ಕೊಂಡೂಸ್ಕರ್, ಚಂದ್ರಕಾಂತ ಕೊಂಡೂಸ್ಕರ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಅಭಿಜೀತ್ ಚವ್ಹಾಣ್ ಅವರು ಕೊಂಡೂಸ್ಕರ್ ಕೊಂಡೂಸ್ಕರ್ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು.