ಕಾಗವಾಡ ತಾಲೂಕ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಉಪಚಾರ ಪಡೆಯಲು ಆಸ್ಪತ್ರೆಗೆ ಆಗಮಿಸಿದ ಕೆಲವರು ಬಯದು, ಕಿರ್ಕೊಳ ನೀಡುತ್ತಿದ್ದರಿಂದ ಎಲ್ಲಾ ಸಿಬ್ಬಂದಿ ವರ್ಗ ಹತಾಶಗೊಂಡ ಮೇಲಾಧಿಕಾರಿಗಳಿಗೆ ನಮಗೆ ಸೌರಕ್ಷಣೆ ನೀಡಿರಿ ಎಂದು ಕೇಳಿಕೊಂಡು ಬೆಳಗ್ಗೆ ಕೆಲ ಕಾಲ ಕೆಲಸ ಸ್ಥಗಿತಗೊಳಿಸಿದರು. ಸ್ಥಳಕ್ಕೆ ತಾಲೂಕ ವೈದ್ಯಾಧಿಕಾರಿ ಡಾ. ಬಸಗೌಡಾ ಕಾಗೆ, ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ ಭೇಟಿ ನೀಡಿ ಸೌರಕ್ಷಣೆ ನೀಡುವ ಭರವಸೆ ನೀಡಿದ ಬಳಿಕ ಕಾರ್ಯಕ್ರಮ ಪ್ರಾರಂಭಿಸಿದರು.
ಗುರುವಾರ ರಂದು ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕ ವೈದ್ಯಾಧಿಕಾರಿ ಬಸಗೌಡಾ ಕಾಗೆ, ಪಿಎಸ್‌ಐ ರಾಘವೇಂದ್ರ ಖೋತ್ ಇವರು ಭೇಟಿ ನೀಡಿ ಎಲ್ಲ ವೈದ್ಯರಿಂದ ಮತ್ತು ಸಿಬ್ಬಂದಿಗಳಿAದ ಆಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿ ಪಡೆದರು.
ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ಪುಷ್ಪಲತಾ ಸುನ್ನದಕಲ್ ಹಾಗೂ ಇನ್ನುಳಿದ ವೈದ್ಯರು ಸಿಬ್ಬಂದಿಗಳು ಮಾಹಿತಿ ನೀಡುವಾಗ, ಉಪ್ಪಚಾರಿಸಲು ಆಗಮಿಸಿದಾಗ ರಕ್ತ ತಪಾಸನ, ಹಾಗೂ ಕೆಲ ಕಾಯಿಲೆಗಳ ಬಗ್ಗೆ ತಪಾಸಣೆ ಮಾಡಿ ರಿಪೋರ್ಟ್ ನೀಡಲು ಕಾಲಾವಕಾಶ ಬೇಕು ಆದರೆ ತಡ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಕೆಲವರು ಹೆದರಿಸುವುದು, ಬೈಯುವುದು ಮಾಡುತ್ತಿದ್ದಾರೆ. ಅಲ್ಲದೆ ನಾವು ಪತ್ರಕರ್ತರು ಎಂದು ಹೇಳಿ ಮೊಬೈಲದಲ್ಲಿ ವಿಡಿಯೋ ಮಾಡಿಕೊಳ್ಳುವುದು ಹೀಗೆ ಅನೇಕ ತೊಂದರೆ ನೀಡುತ್ತಿದ್ದಾರೆ. ನಮಗೆ ಸೌರಕ್ಷಣೆ ಇಲ್ಲ ನಮಗೆ ಸೌರಕ್ಷಣೆ ನೀಡಿರಿ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.
ಡಾಕ್ಟರ್ ಬಸಗೌಡ ಕಾಗೆ ಮಾತನಾಡಿ, ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಒಳ್ಳೆಯ ಉಪಚಾರ ವ್ಯವಸ್ಥೆ ನೀಡಲಾಗುತ್ತಿದೆ. ಉಪಚಾರ ಪಡೆಯಲು ಕಾಗವಾಡ ತಾಲೂಕಿನ ರೋಗಿಗಳ ಅಷ್ಟೇ ಅಲ್ಲ ಮಹಾರಾಷ್ಟ್ರದ ಶಿರೋಳ ತಾಲೂಕಿನ ಪರಿಸರದ ರೋಗಿಗಳು ಉಪಚ್ಚಾರ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅನೇಕ ರೋಗಿಗಳಿಗೆ ಅನುಕೂಲವಾಗಿದೆ. ಇದೇ ರೀತಿ ಉಪಚ್ಚಾರ ವ್ಯವಸ್ಥೆ ಮುಂದೆವರಿಸುತಿದ್ದೇವೆ ಆದರೆ ಕೆಲವರು ಅನಾವಶ್ಯಕವಾಗಿ ಕಿರಕೊಳ ನೀಡುತ್ತಿದ್ದು ಇದು ತಪ್ಪು. ಎಲ್ಲ ತಪಾಸನೆಗಳು ಮಾಡಿಕೊಂಡು ರಿಪೋರ್ಟ್ ನೀಡಲು ಕಾಲಾವಕಾಶ ಬೇಕಾಗಿರುತ್ತದೆ ತಕ್ಷಣ ಎಲ್ಲ ಸೇವೆ ನೀಡುವವರು ಅಸಾಧ್ಯವಿದೆ ಇದನ್ನು ಅರಿತು ಎಲ್ಲ ಜನ ಸಹಕರಿಸಿರಿ. ಎಂದು ಹೇಳಿ ಪೊಲೀಸ್ ಅಧಿಕಾರಿಗಳಿಗೆ ನಮ್ಮ ಸಿಬ್ಬಂದಿಗಳಿಗೆ ತೊಂದರೆಗಳು ಆಗದಂತೆ ನೋಡಿಕೊಳ್ಳಲು ಕೆಲ ಸಿಬ್ಬಂದಿಗಳು ನೇಮಕಾತಿ ಮಾಡಿರಿ ಎಂದು ಕೇಳಿಕೊಂಡಾಗ, ಅಧಿಕಾರಿಗಳು ಒಪ್ಪಿದ್ದು ಅನಾವಶ್ಯಕವಾಗಿ ತೊಂದರೆ ನೀಡುವವರನ್ನು ಬಂದೋಬಸ್ತ್ ಮಾಡುತ್ತೇವೆ ಎಂದರು.
ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ ವೈದ್ಯಕೀ ಸಿಬ್ಬಂದಿಗಳಿಗೆ ಭರವಸೆ ನೀಡಿ ನಿಮ್ಮ ಸೇವೆಯಲ್ಲಿ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿ ಸಾರ್ವಜನಿಕರಿಗೆ ಸಹಕಾರ ನೀಡಲು ವಿನಂತಿಸಿದರು.
ಪ್ರತಿಯೊಬ್ಬರ ಮೊಬೈಲಿಗೆ ಅನಾವಶ್ಯಕವಾಗಿ ಬರುವ ಕರೆಗಳು ಸ್ವೀಕರಿಸಿರಬೇಡಿ. ಅಲ್ಲದೆ ವಾಟ್ಸಾಪ್ಗಳಲ್ಲಿ ಬೇರೆ-ಬೇರೆ ಹೆಸರಿನಲ್ಲಿ ಮೆಸೆಜ ಬರುತ್ತಿವೆ ಅದನ್ನು ಓಪನ್ ಮಾಡಿ ಬಳಸಬೇಡಿ. ಅನಾವಶ್ಯಕವಾಗಿ ತೊಂದರೆಗೆ ಸಿಲುಕಿದ್ದೀರಿ ಎಂದು ಹೇಳಿ ಇಂತಹ ಕರೆಗಳನ್ನು ಬಂದಾಗ ಪೊಲೀಸ್ ಇಲಾಖೆಗೆ ಸಂಪರ್ಕಿಸಿರಿ. ಮೋಸಗಾರರು ನಿಮ್ಮನ್ನು ಮೋಸ ಮಾಡುತ್ತಾರೆ ಎಚ್ಚರಿಕೆ ಇರಿ ಎಂಬ ಸಲಹೆ ನೀಡಿದರು.
ಈ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kagawad
ನಮಗೆ ಸೇವೆ ಸಲ್ಲಿಸಲು ಭದ್ರತೆ ಒದಗಿಸಿ

