ಸವದತ್ತಿಯಲ್ಲಿ ಕಂಡಕ್ಟರ್ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಪೊಲೀಸಪ್ಪನನ್ನು ಬೆಳಗಾವಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸವದತ್ತಿಯಲ್ಲಿ ವಿಚ್ಛೇದನ ಪಡೆದ ಪತ್ನಿಯನ್ನು ಭೀಕರವಾಗಿ ಪೊಲೀಸ್ ಪೇದೆಯೊಬ್ಬ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಅವರು ಮಾಹಿತಿಯನ್ನು ನೀಡಿದ್ದಾರೆ. ಸವದತ್ತಿಯಲ್ಲಿ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಕಾಶವ್ವಳ ಮೇಲೆ ಆಕೆಯ ಪೊಲೀಸ್ ಪೇದೆ ಪತಿ ಸಂತೋಷ ಕಾಂಬಳೆ ಹಲ್ಲೆ ಮಾಡಿದ ಹಿನ್ನೆಲೆ ಹಿಂದೊಮ್ಮೆ ಪ್ರಕರಣ ದಾಖಲಾದ ಹಿನ್ನೆಲೆ ಆತನನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಇತ್ತಿಚೇಗೆ 6 ತಿಂಗಳ ಹಿಂದೇ ವಿಚ್ಛೇದನ ಪಡೆದರೂ ಪತ್ನಿಯನ್ನು ಸಂತೋಷ ಕೊಲೆ ಮಾಡಿದ್ದಾನೆ. ಆ ದಿನವೇ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ ಎಂದು ಹೆಚ್ಚಿನ ಮಾಹಿತಿಯನ್ನು ನೀಡಿದರು..

