Belagavi

ಮಟಕಾ ಮತ್ತು ಅಕ್ರಮ ಸಾರಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಓಟ್ಟು ನಾಲ್ವರನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ.

Share

ದಿ: 13/10/2025 ರಂದು ಬೆಳಗಾವಿಯ ಮಾಸ್ತಮರ್ಡಿ ಗ್ರಾಮದ ಕನ್ನಡ ಶಾಲೆ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಮಂಜುನಾಥ ಭಜಂತ್ರಿ, ಪಿಎಸ್‌ಐ ಸಿಸಿಬಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ತಾರೀಹಾಳದ ನಾಗಪ್ಪ ತಮ್ಮಣ್ಣ ಗೋಲಾಯಿ (54), ಸುರೇಶ ಸಿದ್ಧಪ್ಪ ಕೋಲಕಾರ (50) ಮತ್ತು ನಾಮದೇವ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿತರಿಂದ ಒಟ್ಟು ₹ 6,060/- ನಗದು ಹಣ ಮತ್ತು ಅಂದಾಜು ₹ 3,000/- ಮೌಲ್ಯದ ಒಂದು ಮೊಬೈಲ್ ಫೋನ್ ಸೇರಿದಂತೆ ಒಟ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರು ಜನ ಆರೋಪಿಗಳ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

ದಿನಾಂಕ: 13/10/2025 ರಂದು ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ಚಿ. ಕೆ. ಮಿಟಗಾರ ಹಾಗೂ ಸಿಬ್ಬಂದಿಯವರು ಕೊಂಡಸಕೊಪ್ಪ ಕ್ರಾಸ್ ಹತ್ತಿರ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ನಾಗಪ್ಪ ಮಾರುತಿ ದೇಮನ್ನವರ (32) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ₹1750/- ಮೌಲ್ಯದ ಓರಿಜಿನಲ್ ಚಾಯ್ಸ್ ಕಂಪನಿಯ 90 ಮಿ.ಲಿ. ಸಾಮರ್ಥ್ಯದ ಒಟ್ಟು 35 ಸ್ಯಾಚೆಟ್‌ಗಳ ಸಾರಾಯಿ ಮತ್ತು ಒಂದು ಚೀಲವನ್ನು ಜಪ್ತಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ. ಈ ಅಕ್ರಮ ಮದ್ಯ ಮಾರಾಟ ಪ್ರಕರಣ ಮತ್ತು ಇನ್ನೊಂದು ಮಟ್ಕಾ ಪ್ರಕರಣವನ್ನು ಸೇರಿ ಒಟ್ಟು ₹10,610/- ಮೌಲ್ಯದ ವಸ್ತುಗಳನ್ನು (₹6,060/- ನಗದು, ₹3,000/- ಮೌಲ್ಯದ ಮೊಬೈಲ್ ಮತ್ತು ₹1,750/- ಮೌಲ್ಯದ ಸಾರಾಯಿ) ವಶಪಡಿಸಿಕೊಳ್ಳಲಾಗಿದ್ದು, ದಾಳಿ ಕೈಗೊಂಡ ಪಿಎಸ್‌ಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ

Tags:

error: Content is protected !!