ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ 19ನೇ ಜಿಲ್ಲಾ ಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ 2025 ಮತ್ತು ಆಯ್ಕೆ ಟ್ರಯಲ್ಸ್ ಅನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯನ್ನು ರೋಡ್ ಮತ್ತು ರಿಂಕ್ ಎಂಬ ಎರಡು ವಿಭಾಗಗಳಲ್ಲಿ ನಡೆಸಲಾಯಿತು.
ರೋಡ್ ಸ್ಪರ್ಧೆಯನ್ನು ಮಾಲಿನಿ ಸಿಟಿ, ಯಡಿಯೂರಪ್ಪ ಮಾರ್ಗ, ಓಲ್ಡ್ ಪಿ.ಬಿ. ರೋಡ್‌ನಲ್ಲಿ ನಡೆಸಿದರೆ, ರಿಂಕ್ ಸ್ಪರ್ಧೆಯನ್ನು ಶಿವಗಂಗಾ ಸ್ಪೋರ್ಟ್ಸ್ ಕ್ಲಬ್‌ನ ಸ್ಕೇಟಿಂಗ್ ರಿಂಕ್‌ನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಸುಮಾರು 150ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಸಮಾಜಸೇವಕರು ಮತ್ತು ಬಸವೇಶ್ವರ ಬ್ಯಾಂಕ್ ಅಧ್ಯಕ್ಷರಾದ ಸತೀಶ್ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಕೇಟಿಂಗ್
ತರಬೇತುದಾರರಾದ ಸೂರ್ಯಕಾಂತ್ ಹಿಂಡಲಗೇಕರ್, ವಿಶ್ವನಾಥ್ ಯಳ್ಳೂರಕರ, ಸೂರಜ್ ಶಿಂಧೆ, ಸ್ಕೇಟರ್‌ಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ಸ್ಪರ್ಧೆ ಮತ್ತು ಆಯ್ಕೆ ಟ್ರಯಲ್ಸ್ ಅನ್ನು ಯಶಸ್ವಿಗೊಳಿಸಲು ಸ್ಕೇಟಿಂಗ್ ತರಬೇತುದಾರರಾದ ಯೋಗೇಶ್ ಕುಲಕರ್ಣಿ, ವಿಶಾಲ್ ವೇಸನೆ, ವಿಠ್ಠಲ್ ಗಂಗಣೆ, ಸೋಹಮ್ ಹಿಂಡಲಗೇಕರ್, ಸಾಗರ ತರಳೆಕರ್, ಹೃಷಿಕೇಶ ಪಸಾರೆ, ಸ್ವರೂಪ್ ಪಾಟೀಲ್ ಸೇರಿದಂತೆ ಎಲ್ಲರೂ ಶ್ರಮಿಸಿದರು.