Dharwad

ಶಿಷ್ಟಾಚಾರ ಉಲ್ಲಂಘನೆ, ಹಕ್ಕುಚ್ಯುತಿಯಾದ ಬಗ್ಗೆ ದೂರು ಸಲ್ಲಿಸುತ್ತೇನೆ- ಶಾಸಕ ಬೆಲ್ಲದ್*

Share

: ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕನಾದ ನನಗೆ ಆಹ್ವಾನ ನೀಡಿರಲಿಲ್ಲ. ಸ್ಥಳೀಯ ಶಾಸಕರ ಸಮಯ ಪಡೆದು ಕಾರ್ಯಕ್ರಮ ನಿಗದಿ ಮಾಡಬೇಕಿತ್ತು. ಆದರೆ, ನನಗೆ ಆಹ್ವಾನವನ್ನೇ ನೀಡಿಲ್ಲ. ಹೀಗಾಗಿ ನಾನು ಹಕ್ಕುಚ್ಯುತಿಯಾದ ಬಗ್ಗೆ ದೂರು ಸಲ್ಲಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ನಡೆದ ರಸ್ತೆ ಕಾಮಗಾರಿ ಪೂಜಾ ಸಮಾರಂಭ ಇದೊಂದು ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ಹಕ್ಕುಚ್ಯುತಿಯ ಕುರಿತು ಮಾತನಾಡಿದ ಅವರು, ಸಿದ್ದಾರೂಢ ಮಠದ ಪಕ್ಕದಲ್ಲೇ ಈ ಕಾರ್ಯಕ್ರಮ ಮಾಡಲಾಗಿದೆ. ವಿಶಾಲನಗರ ಸಿದ್ದಾರೂಢ ಮಠಕ್ಕೆ ಹೊಂದಿಕೊಂಡ ನಗರ. ಈ ಕಾರ್ಯಕ್ರಮದಲ್ಲಿ ಖುರಾನ್ ಪಠಣ ಮಾಡಿಸಲಾಗಿದೆ. ಈ ಕಾರ್ಯಕ್ರಮವನ್ನು ಅಲ್ಲೇ ಏಕೆ ಮಾಡಬೇಕಿತ್ತು? ಮಠದ ಬಳಿ ಖುರಾನ್ ಪಠಣ ಮಾಡಿದ್ದು ಸರಿಯಲ್ಲ, ಅದಕ್ಕೆ ನಾನು‌ ವಿರೋಧ ಮಾಡಿದ್ದೇನೆ. ಪೂಜೆ ಪದ್ಧತಿ ಒಂದೇ ರೀತಿ ಇಲ್ಲ. ಅಲ್ಲಿ ನಡೆದದ್ದು ಓಲೈಕೆ ರಾಜಕಾರಣ. ಅಂದು ನಡೆದದ್ದು ಕಾಂಗ್ರೆಸ್ ಕಾರ್ಯಕ್ರಮವೋ ಅಥವಾ ಸರ್ಕಾರಿ ಕಾರ್ಯಕ್ರಮವೋ ಎಂದು ಅವರಲ್ಲೇ ಗೊಂದಲವಿದೆ. ಸಂತೋಷ ಲಾಡ್ ಹಾಗೂ ಪ್ರಿಯಾಂಕ ಖರ್ಗೆ ಪದೇ ಪದೇ ಆರ್‌ಎಸ್‌ಎಸ್ ಹಾಗೂ ಮೋದಿ ಅವರ ಬಗ್ಗೆ ಟೀಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬೆಲ್ಲದ್, ಲಾಡ್ ಅವರು ಟ್ರಂಪ್ ಮತ್ತು ಮೋದಿ ಅವರಿಗೆ ಸಲಹೆ ಕೊಡುತ್ತಾರೆ. ಇಷ್ಟು ಅನುಭವ ಇದ್ದವರು ಯಾಕೆ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ತಪ್ಪು ಮಾಡಿದರು? ಜನರಿಗೆ ಬುದ್ಧಿ ಹೇಳುವವರು ತಮ್ಮ ಪಕ್ಷದ ಬ್ಯಾನರ್ ಅಡಿ ಯಾಕೆ ಸರ್ಕಾರಿ‌ ಕಾರ್ಯಕ್ರಮ ಮಾಡಿದರೋ ಗೊತ್ತಿಲ್ಲ ಎಂದರು.

 

Tags:

error: Content is protected !!