ವೈದ್ಯಕೀಯ ಸೇವೆಗಳನ್ನು ಉನ್ನತಿಕರಿಸುವುದೇ ರಾಜ್ಯ ಸರ್ಕಾರದ ಗುರಿಯಾಗಿದೆ. ರಜತ ಮಹೋತ್ಸವವನ್ನು ಆಚರಿಸುತ್ತಿರುವ ಬೆಳಗಾವಿ ಡೆಕ್ಕನ್ ಮೆಡಿಕಲ್ ಸೇಂಟರ್ ಆಸ್ಪತ್ರೆಗೆ 100 ಬೆಡ್ಡುಗಳಿಂದ 1000 ಬೆಡ್ಡಿನ ಆಸ್ಪತ್ರೆಯಾಗಿ ಇನ್ನಷ್ಟು ಉತ್ತಮ ಸೇವೆಯನ್ನು ನೀಡಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾರೈಸಿದರು.
ಬೆಳಗಾವಿಯ ಗೂಡ್ಸಶೆಡ್ ರಸ್ತೆಯಲ್ಲಿರುವ ಡೆಕ್ಕನ್ ಮೆಡಿಕಲ್’ನ ರಜತ ಮಹೋತ್ಸವದ ಹಿನ್ನೆಲೆ ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಉಪಸ್ಥಿತರಿದ್ಧರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ದಕ್ಷಿಣ ಶಾಸಕ ಅಭಯ್ ಪಾಟೀಲ್, ಚಿಕ್ಕೋಡಿ ಎಂ.ಎಲ್.ಸಿ ಗಣೇಶ್ ಹುಕ್ಕೇರಿ, ಎಂ.ಎಲ್.ಸಿ ನಾಗರಾಜ್ ಯಾದವ್, ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ಶಾಸಕ ಸಂಜಯ್ ಪಾಟೀಲ್, ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಸಾವಿತ್ರಿ ದೊಡ್ಡಣ್ಣವರ, ಡಾ. ರಮೇಶ್ ದೊಡ್ಡಣ್ಣವರ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. (ಫ್ಲೋ)
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ತಮ್ಮ ಸರ್ಕಾರದ ಅವಧಿಯಲ್ಲಿ ಹೊಸ ತಾಲೂಕುಗಳಿಗೆ ಹೊಸ ಆಸ್ಪತ್ರೆಗಳನ್ನು ಮಂಜೂರು ಮಾಡಲಾಗಿದೆ. ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಿ, ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿ ಎ.ಐ ನಂತರ ನೂತನ ತಂತ್ರಜ್ಞಾನಗಳನ್ನು ನೀಡಿ, ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಖಾಸಗಿ ಸಂಸ್ಥೆಗಳು ಕೈ ಜೋಡಿಸುತ್ತಿದ್ದು, ಡೆಕ್ಕನ್ ಮೆಡಿಕಲ್ ಸೇಂಟರ್ 100 ರಿಂದ 1000 ಬೆಡ್ಡಿನ ಆಸ್ಪತ್ರೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಬೈಟ್
ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಡೆಕ್ಕನ್ ಮೆಡಿಕಲ್ ಮೊದಲಿನಿಂದಲೂ ಬಡ ಮಧ್ಯಮ ವರ್ಗದ ರೋಗಿಗಳ ಸೇವೆಯನ್ನು ಮಾಡುತ್ತ ಬಂದಿದೆ. ದೊಡ್ಡಣ್ಣವರ ತಜ್ಞ ವೈದ್ಯರಾಗಿದ್ದು, ತಾಯ್ನಾಡಿನಲ್ಲಿ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯ. 25 ವರ್ಷದ ಅವರ ಸಾಧನೆಗೆ ಶುಭ ಹಾರೈಸಿ ಅದು ತನ್ನ ಸೇವೆಯನ್ನು ಮುಂದುವರೆಸಲಿ. ಹೊಸ ಹೊಸ ತಂತ್ರಜ್ಞಾನಗಳನ್ನು ವೈದ್ಯಕೀಯ ಕ್ಷೇತ್ರಕ್ಕೆ ನೀಡಿ ರೋಗಿಗಳ ಸೇವೆಯನ್ನು ಮಾಡಲಿ. ಯಶಸ್ಸಿನ ಶಿಖರವನ್ನು ತಲುಪಲಿ ಎಂದು ಹಾರೈಸಿದರು.
ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ನನ್ನ ಕ್ಷೇತ್ರದಲ್ಲಿ ಪ್ರತಿಷ್ಠಿತ ಡೆಕ್ಕನ್ ಮೆಡಿಕಲ್ ಇರುವುದು ಸಂತಸದ ವಿಷಯ. ಬೆಳಗಾವಿಯಲ್ಲಿ ರಮೇಶ್ ದೊಡ್ಡಣ್ಣವರ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದಾರೆ. ಅವರ 100 ಬೆಡ್ಡಿನ ಆಸ್ಪತ್ರೆ 100 ಬೆಡ್ಡಿನ ಆಸ್ಪತ್ರೆಯಾಗಲಿ ಎಂದು ಆಶಿಸಿಸಿದರು. ಬೈಟ್
ಎಂ.ಎಲ್.ಸಿ ಪ್ರಕಾಶ್ ಹುಕ್ಕೇರಿ ಅವರು, ಡೆಕ್ಕನ್ ಮೆಡಿಕಲ್ ಸೇಂಟರ್ ಕಳೆದ 25 ವರ್ಷಗಳಿಂದ ಅವಿರತವಾಗಿ ಸಲ್ಲಿಸುತ್ತಿರುವ ಸೇವೆ ಸಾಮಾನ್ಯವಲ್ಲ. ಕೆ.ಎಲ್.ಇ ಮಾದರಿಯಲ್ಲಿ ಡೆಕ್ಕನ್ ಆಸ್ಪತ್ರೆ ಬೆಳೆಯುತ್ತಿದ್ದು, ಈ ಆಸ್ಪತ್ರೆ ಇನ್ನಷ್ಟು ಉನ್ನತಿಕರಣಗೊಂಡಿ ರೋಗಿಗಳಿಗೆ ಸೇವೆ ನೀಡಲಿ ಎಂದರು.
ಇನ್ನು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಆಸ್ಪತ್ರೆಗಳನ್ನು ನಡೆಸುವುದು ಅಷ್ಟು ಸುಲಭದ ಮಾತಲ್ಲ. ಸರ್ಕಾರದ ನಿಯಮಗಳನ್ನು ಪಾಲಿಸಿ ಆಸ್ಪತ್ರೆಗಳನ್ನು ನಡೆಸಬೇಕಾಗುತ್ತದೆ. 80 ರ ದಶಕದಲ್ಲಿ ಬಹಳಷ್ಟು ಕಡಿಮೆ ಆಸ್ಪತ್ರೆಗಳಿದ್ದವು. ಆದರೇ, ಈಗ ಕಾಲ ಬದಲಾಗಿದೆ. ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ರೋಗಗಳ ಸಂಖ್ಯೆ ಹೆಚ್ಚಾಗುವುದು. ರೋಗಗಳು ಹೆಚ್ಚಾಗುವ ಮೊದಲೇ ರೋಗಿಗಳು ಎಚ್ಚೆತ್ತುಕೊಳ್ಳುವುದು ಅವಶ್ಯಕವಾಗಿದೆ. ಇದಕ್ಕೆ ನಮ್ಮ ಜೀವನದ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಿದೆ ಎಂದರು.
ಇನ್ನು ಡೆಕ್ಕನ್ ಮೆಡಿಕಲ್ ಆಸ್ಪತ್ರೆಯ ಸಂಸ್ಥಾಪಕ ಡಾ. ರಮೇಶ್ ದೊಡ್ಡಣ್ಣವರ, ವಿದೇಶದಲ್ಲಿ ಕಲಿತ ಬಳಿಕವು ಸ್ವದೇಶದ ಜನರ ಸೇವೆಗೆಂದು 25 ವರ್ಷ ಹಿಂದೆ ಬೆಳಗಾವಿಯಲ್ಲಿ ತಮ್ಮ ಸೇವೆಯನ್ನು ಆರಂಭಿಸಲಾಗಿತ್ತು. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಜನರಿಗೆ ಹೊಸ ತಂತ್ರಜ್ಞಾನಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ನಮ್ಮ ಈ ಸೇವೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು. ಬೈಟ್
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.