ಕಾಗವಾಡ ತಾಲೂಕಿನ ಶಿರುಗುಪ್ಪಿ ಸಕ್ಕರೆ ಕಾರ್ಖಾನೆ 13ನೆ ಕಬ್ಬು ನುರಿಸುವ ಹಂಗಾಮಕ್ಕೆ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು, ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗ್ಗೆನವರ ಇವರ ಹಸ್ತ ಯಿಂದ ಚಾಲನೆ ನೀಡಲಾಯಿತು.
ಸೋಮವಾರ ರಂದು ಬೆಳಗ್ಗೆ ಸಕ್ಕರೆ ಕಾರ್ಖಾನೆಯ 13ನೇ ಕಬ್ಬು ನೂರುಸುವ ಹಂಗಾಮದ ಬಾಯ್ಲರ್ ಪೂಜೆ ನಿಡಸೋಶಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ಪೂಜೆ ನೆರವೇರಿತು.
ಸ್ವಾಮೀಜಿ ಆಶೀರ್ವದಿಸುತ್ತಿರುವಾಗ ಸಿರುಗುಪ್ಪಿ ಸಕ್ಕರೆ ಕಾರ್ಖಾನೆ, ಮಾಲೀಕರು ಕಳೆದ 12 ಹಂಗಾಮಿನಲ್ಲಿ ಪ್ರಥಮ ಬಾರಿಗೆ ರೈತರಿಗೆ ಬಿಲ್ ಘೋಷಣೆ ಮಾಡುವ ದೊಂದಿಗೆ ಸಕಾಲದಲ್ಲಿ ಬಿಲ್ ಪಾವತಿಸಿದ್ದಾರೆ, ಇದು ಒಂದು ಆದರ್ಶ ಸಕ್ಕರೆ ಕಾರ್ಖಾನೆ ಈ ಪರಿಸರದಲ್ಲಿ ವಾಗಿದೆ, ಎಂದು ಸ್ವಾಮೀಜಿ ಹೇಳಿ ಸಂತಸ ವ್ಯಕ್ತಪಡಿಸಿದರು.
ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಕೆ ಪಿ
ಮಗ್ಗೆನವರ್ ಮಾತನಾಡಿ ಸಕ್ಕರೆ ಕಾರ್ಖಾನೆಗೆ ಕಬ್ಬುಪುರಯಸುವಾಗ ರೈತರು ಕಳೆದ 12 ಹಂಗಾಮಿನಲ್ಲಿ ಕಬ್ಬು ಪುರೈಸಿ ಸಹಕರಿಸಿದ್ದಾರೆ. ಇದೇ ರೀತಿ ಹದಿಮೂರನೇ ಹಂಗಾಮಿನಲ್ಲಿ ಕಬ್ಬು ಪೂರೈಸಿರಿ ಎಂದು ಕೇಳಿಕೊಂಡು. ಈ ಹಂಗಾಮಿನಲ್ಲಿ ಯೋಗ್ಯವಾದ ಬಿಲ್ ನೀಡುವುದಾಗಿ ಬರವಸೆ ನೀಡಿದರು.
ಸಕ್ಕರೆ ಕಾರ್ಖಾನೆಯ ಆಡಳಿತ ಅಧಿಕಾರಿ ಅರುಣ್ ಪರಾಂಡೆ ಮಾತನಾಡಿ ಈ ಹಂಗಾಮಿನಲ್ಲಿ 12 ಲಕ್ಷ ಕಬ್ಬುನುರಿಸುವ ಗುರಿ ಇಟ್ಟುಕೊಂಡಿದ್ದೇವೆ. ಕಾರ್ಖಾನೆಯಲ್ಲಿ ಉಪ ಪದಾರ್ಥ ಘಟಕಗಳು ಪ್ರಾರಂಭವಿದ್ದು ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿರಿ ಎಂದು ಮನವಿ ಮಾಡಿಕೊಂಡರು.
ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಹಾವೀರ ಸುಗಾನವರ್ ಹಾಗೂ ರಾಜೇಗೌಡ
ಸುಗಾನಅವರ ಇವರ ರಸ್ತೆಯಿಂದ ಕಾರ್ಖಾನೆಯಲ್ಲಿ ಕ್ಯಾರಿಯರ್ ಪೂಜೆ ನೆರವೇರಿಸಲಾಯಿತು.
ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಾದ ರವೀಂದ್ರ ಜಾಡರ. , ಮಹಾವೀರ್ ಬಿರ್ನಾಳೆ, ಕೌತುಕ ಮಗನವರ್, ಲಕ್ಷ್ಮಿ ಬ್ಯಾಂಕಿನ ಸಿಇಒ ಸಾಗರ್ ಮಂಗಸುಳೆ, ಎಲ್ಲಾ ನಿರ್ದೇಶಕರು ಅಧಿಕಾರಿ ವರ್ಗ ದವರು ಪಾಲ್ಗೊಂಡಿದ್ದರು.
ಸಕ್ಕರೆ ಕಾರ್ಖಾನೆಯ ಕಾರ್ಮಿಕರು ರೈತರು ಹಂಗಾಮ ಪ್ರಾರಂಭಿಸಿ ಇದರಿಂದ ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡರು.