Kagawad

ತಾಲೂಕಿನ ದಲಿತ ಸಮಾಜದ ಮುಖಂಡರು ನ್ಯಾಯವಾದಿಗಳು ಕಾಗವಾಡದಲ್ಲಿ ಪ್ರತಿಭಟನೆ.

Share

ಭಾರತದ ಸಂವಿಧಾನದ ಮೂರು ಅಂಗಳಾದ ಕಾರ್ಯಾಂಗ, ಶಾಸಂಕಾಗಳಲ್ಲಿ ನ್ಯಾಯಾಂಗ ಸರ್ವೂಚ್ಚವಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಹಾಳು ಮಾಡಲು ಮನುವಾಗಿ ತತ್ವಗಳು ನಿರಂತರ ಪ್ರಯತ್ನ ಮಾಡುತ್ತಿವೆ. ಈಗ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದು, ನ್ಯಾಯಾಂಗದ ಪಾವಿರ್ತತ್ಯಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದು, ಇಂತಹ ದುಷ್ಟ ವ್ಯಕ್ತಿಗಳ ಮೇಲೆ ದೇಶದ್ರೋಹದ ದೂರ ದಾಖಲಿಸಿ, ದೇಶದಿಂದ ಗಡಿಪಾರು ಮಾಡಬೇಕೆಂದು, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜಯ ತಳವಳಕರ ಆಗ್ರಹಿಸಿದ್ದಾರೆ.

ಅವರು ಸೋಮವಾರ ಬೆಳಿಗ್ಗೆ ಕಾಗವಾಡ ತಹಶೀಲ್ದಾರ ಕಚೇರಿ ಎದುರು ಕಾಗವಾಡ ಹಾಗೂ ಅಥಣಿ ತಾಲೂಕಿನ ವಿವಿಧ ದಲಿತ ಸಂಘಟನೆಗಳು ಮತ್ತು ನ್ಯಾಯವಾದಿಗಳು ಒಂದು ಗೂಡಿ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿ, ಮಾತನಾಡುತ್ತಿದ್ದರು.
ಬೆಳಿಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ದಲಿತ ಸಂಘಟನೆಯ ಮುಖಂಡರು, ಜಿಲ್ಲಾ ಸಂಚಾಲಕ ಸಂಜಯ್ ತಳವಳಕರ್ ನೇತೃತ್ವದಲ್ಲಿ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರ ಮೇಲೆ ಮತ್ತು ಗ್ವಾಲಿಯರದ ವಕೀಲ ಅನೀಲ ಮಿಶ್ರಾ ಡಾ. ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಈ ಇಬ್ಬರು ವಕೀಲರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರವಾಸಿ ಮಂದಿರದಿAದ ತಹಶೀಲ್ದಾರ ಕಚೇರಿ ವರೆಗೆ ಪ್ರತಿಭಟನೆ ಮೆಣದ ಬತ್ತಿ ದೀಪದೊಂದಿಗೆ ಬ್ರಹತ್ ಪ್ರತಿಭಟನೆ ಕೈಗೊಳ್ಳಲಾಯಿತು.
ಅಥಣಿ ನ್ಯಾಯವಾದಿಗಳಾದ ಸಚೀನ ವಾಘಮೋರೆ, ನಿತೀನ ಪಟ್ಟಣ, ಉಮೇಶ ಮನೋಜೆ, ಶಶಿಕಾಂತ ನಿಡೋಣಿ, ದಯಾನಂದ ಭಂಡಾರೆ, ವಿದ್ಯಾಧರ ಧೊಂಡಾರೆ ಸೇರಿದಂತೆ ಮಹಿಳಾ ಕಾರ್ಯಕರ್ತೆಯರು ಆಕ್ರೋಶ ಭರಿತ ಮಾತನಾಡಿ, ಆರ್‌ಎಸ್‌ಎಸ್ ಸಂಘಟನೆಯ ವಿರುದ್ಧ ಹರಿಹಾಯ್ದರು.

ಈ ವೇಳೆ ಪ್ರಕಾಶ ಧೊಂಡಾರೆ, ದಯಾನಂದ ಭಂಡಾರೆ, ಮಹಾಂತೇಶ ಬಡಿಗೇರ, ಮೀರಾ ಕಾಂಬಳೆ, ಉದಯ ಖೋಡೆ, ರವಿ ಕುರಣೆ, ವಿಶಾಲ ಧೊಂಡಾರೆ, ರವಿ ಕಾಂಬಳೆ, ವಿಜಯ ಅಸೋದೆ, ಪ್ರಕಾಶ ಕಾಂಬಳೆ, ಪ್ರಸಾದ ಶಿಂಗೆ, ಪ್ರಕಾಶ ಕಾಂಬಳೆ, ಶೇಖರ ಕುರಾಡೆ ಸೇರಿದಂತೆ ಮಹಿಳಾ ಕಾರ್ಯಕರ್ತೆರು, ಸಾವಿರಾರು ದಲಿತ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!