ಚಿಕ್ಕೋಡಿ:ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಶಾಸಕ ಗಣೇಶ ಹುಕ್ಕೇರಿ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಪುರಸಭೆ ಸದಸ್ಯ ಸಾಬೀರ ಜಮಾದಾರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಮಾಡಿದರು.
ಶಾಸಕ ಗಣೇಶ ಹುಕ್ಕೇರಿ 2 ನೇ ಬಾರಿಗೆ ಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಹಿನ್ನಲೆಯಲ್ಲಿ ಚಿಕ್ಕೋಡಿ ಪಟ್ಟಣದ ಬಸವವೃತ,ಬಸ್ ನಿಲ್ದಾಣ,ಪುರಸಭೆ ಸಮೀಪದಲ್ಲಿ ಪುರಸಭೆ ಸದಸ್ಯ ಸಾಬೀರ ಜಮಾದಾರ ನೇತೃತ್ವದಲ್ಲಿ ಪಟಾಕಿ ಸಿಡಿಸಿ,ಗಣೇಶ ಹುಕ್ಕೇರಿಯವರಿಗೆ ಜೈ ಎಂದು ಘೋಷಣೆಯನ್ನು ಕೂಗಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಈರಫಾನ ಬೇಪಾರಿ, ಗುಲಾಬ ಹುಸೇನ ಬಾಗವಾನ,ಮಂಜೂರ ಜಮಾದಾರ ರವಿ ದರ್ಜಿ,ಸುಧೀರ ಮಾಯಪ್ಪಗೋಳ,ಜೋಹಿಬ ಜಮಾದಾರ,ಶಮಿ ಜಮಾದಾರ, ಮಹೇಶ ಪರೀಟ್ಟ್,ಡಾ!ಸಮಿ ಜಮಾದಾರ, ಹಣಮಂತ ಗಾಡಿವಡ್ಡರ ಮಹೇಶ ಪರೀಟ್ಟ್, ಕಪಿಲ ನಸಲಾಪೂರೆ,ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.