Accident

ಆಪತ್ಭಾಂಧವನಾಗಿ ಬಂದ್ ಆರ್.ಪಿ.ಎಫ್ ಸಿಬ್ಬಂದಿ…

Share

ಬೆಳಗಾವಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ ರೈಲಿನಿಂದ ಬಿದ್ದ ವೃದ್ಧರೊಬ್ಬರನ್ನು ಕ್ಷಣಾರ್ಧದಲ್ಲಿ RPF ಸಿಬ್ಬಂದಿ ರಕ್ಷಿಸಿದ ಘಟನೆ ನಿನ್ನೆ ಬೆಳಗಾವಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಉಚಗಾಂವ ಸಮೀಪದ ಬಸುರ್ತೆ ಗ್ರಾಮದ ನಿವಾಸಿಯಾದ ಭರಮಾ ಗಂಗರಾಮ ಕುಂಬಾರ (55) ಎಂಬುವರು ಬೆಳಗಾವಿ ಯಿಂದ ಪುಣೆಗೆ ತೆರಳುವ ತಮ್ಮ ಮೊಮ್ಮಗನಾದ ಲಕ್ಷ್ಮಿ ರಾಜಾರಾಮ ಕುಂಬಾರ ಅವರನ್ನು ಮೈಸೂರು–ಅಜ್ಮೀರ್ ಎಕ್ಸಪ್ರೆಸ್ ರೈಲಿಗೆ ಬೀಳ್ಕೊಡಲು ಬಂದಿದ್ದರು.

ಆಗ ರೈಲು ಚಲಿಸಲು ಪ್ರಾರಂಭಿಸಿದಾಗ ಬೀಳ್ಕೊಡಲು ಬಂದ ಅವರು ಆತಂಕಗೊಂಡು ಚಲಿಸುತ್ತಿರುವ ರೈಲಿನಿಂದ ಇಳಿಯಲು ಯತ್ನಿಸಿ ಜಾರಿಬಿದ್ದು, ಪ್ಲಾಟ್ ಫಾರ್ಮ್ ಹಾಗೂ ರೈಲಿನ ನಡುವಿನ ಚಿಕ್ಕ ಜಾಗದಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಕರ್ತವ್ಯ ನಿರತ RPF ಹೆಡ್ ಕಾನ್ಸ್ಟೇಬಲ್ C.I. ಕೊಪ್ಪದ ಗಮನಿಸಿ ತಕ್ಷಣ, ಧೈರ್ಯದಿಂದ ಮುನ್ನುಗಿ ಆ ವಯಸ್ಕರನ್ನು ರಕ್ಷಿಸಿದರು. ನಂತರ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಹೆಡ್ ಕಾನ್ಸ್ಟೇಬಲ್ ಸಿ. ಐ. ಕೊಪ್ಪದ ಅವರ ಜಾಗರೂಕತೆ ಹಾಗೂ ಕರ್ತವ್ಯ ನಿಷ್ಠೆಯಿಂದ ಅನಾಹುತ ತಪ್ಪಿದೆ. ಇವರ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.RPF ಹೆಡ್ ಕಾನ್ಸ್ಟೇಬಲ್ ಸಿ. ಐ. ಕೊಪ್ಪದ ಸದ್ಯ ಬೆಳಗಾವಿ RPF ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Tags:

error: Content is protected !!