hubbali

ಹಿಂದೂ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮುಸ್ಲಿಂ ಯುವಕ ಅರೆಸ್ಟ್

Share

ಹಿಂದೂ ಧರ್ಮದ ಬಾಲಕಿಯನ್ನು ಪುಸಲಾಯಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮುಸ್ಲಿಂ ಯುವಕನೋರ್ವ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ, ಹುಬ್ಬಳ್ಳಿಯ ಗೋಕುಲ್ ರೋಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು ಸೈಯದ್ ರುಹಾನ್ ಎನ್ನುವ ಮುಸ್ಲಿಂ ಯುವಕನೋರ್ವ ರಮೇಶ್ ಎಂದು ಸುಳ್ಳು ಹೆಸರು ಹೇಳಿ ಹಿಂದೂ ಬಾಲಕಿಯನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ಬಾಲಕಿಯೊಂದಿಗೆ ಕಾಮದಾಹ ತೀರಿಸಿಕೊಳ್ಳಲು ನಿರ್ಜನ ಪ್ರದೇಶಕ್ಕೆ ಕರೆಕೊಂಡು ಹೋಗಿದ್ದ ವೇಳೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಆತನ ಮೊಬೈಲ್ ಪರಿಶೀಲಿಸಿದಾಗ ಫೋನ್ ನಲ್ಲಿ ಬೇರೆ ರಾಸಲೀಲೆ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಲೈಂಗಿಕ ಕ್ರಿಯೆಗೆಂದು ಬಾಲಕಿಯನ್ನು ಪುಸಲಾಯಿಸಿ ಹೊಲಕ್ಕೆ ಕರೆದೊಯ್ದಿದ್ದಾನೆ. ಅದೇ ವೇಳೆ ಸ್ಥಳೀಯರು ಯುವಕನನ್ನು ಹಿಡಿದುಕೊಂಡು ವಿಚಾರಿಸಿದ್ದಾರೆ. ಈ ಬಗ್ಗೆ ಬಾಲಕಿ ಕುಟುಂಬಸ್ಥರು ಗೋಕುಲ್ ರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಪೊಲೀಸರು ಸೈಯದ್ ರುಹಾನ್‌ನ್ನು ಅರೆಸ್ಟ್ ಮಾಡಿದ್ದಾರೆ.

Tags:

error: Content is protected !!