raybag

ಪ್ರೀತಿಸಿದ ಯುವಕನೊಂದಿಗೆ ಮಗಳು ಪರಾರಿ

Share

19 ವರ್ಷದ ಹುಡುಗಿ, 29 ವರ್ಷದ ಹುಡುಗ ಪರಸ್ಪರ ಪ್ರೀತಿಸಿ ಮನೆಯಿಂದ ಪರಾರಿಯಾದ ಹಿನ್ನಲೆ ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು ನೊಂದ ತಂದೆ ಆಕೆಯ ತಿಥಿ ಮಾಡಿ ಊರಿಗೆ ಊಟ ಹಾಕಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಸುಶ್ಮಿತಾ ಶಿವಗೌಡ ಪಾಟೀಲ ಎಂಬಾಕೆ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾಗಿದ್ದಳು. ಇದರಿಂದ ಕುಪಿತಗೊಂಡ ತಂದೆ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ ಊಟ ಹಾಕಿಸಿದ್ದಾರೆ. ಸುಶ್ಮಿತಾ ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ವಿಠ್ಠಲ ಬಸ್ತವಾಡ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಸುಶ್ಮಿತಾ ತಂದೆಗೆ ನಾಲ್ಕು ಜನ ಹೆಣ್ಣುಮಕ್ಕಳು, ಇವಳು ಕೊನೆಯವಳಾಗಿದ್ದಳು.

ಮನೆತನದ ಸಂಸ್ಕಾರ ಮುರಿದು ಮಗಳು ಓಡಿಹೋಗಿದ್ದರಿಂದ ಮನನೊಂದಿರೋ ಶಿವಗೌಡ ಪಾಟೀಲ. ಮೊದಲಿಗೆ ರಾಯಬಾಗ ಪೊಲೀಸ್ ಸ್ಟೇಷನ್‌ನಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದರು. ನಂತರ ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭರ್ಜರಿ ಭೋಜನ ಹಾಕಿಸಿ ಮಗಳ ಶ್ರಾದ್ಧವನ್ನು ಮಾಡಿದ್ದಾರೆ.

Tags:

error: Content is protected !!