Kagawad

ಅಥಣಿ ತಾಲೂಕಿನ ಕಾಡಸಿದ್ದೇಶ್ವರ ಮಠದಲ್ಲಿ 21ನೇ ದಸರಾ ಮಹೋತ್ಸವ ಭಕ್ತಿಯಿಂದ ಆಚರಿಸಲಾಯಿತು

Share

ಅಖಂಡ ಭಾರತ ಸುಭದ್ರ ರಾಷ್ಟ್ರ ನಿರ್ಮಾಣ ಸಂಕಲ್ಪ ಮಾಡಿಕೊಂಡು ದಸರಾ ಮಹೋತ್ಸವದ ನಿಮಿತ್ಯ ನಿರಂತರ 11 ದಿನಗಳ ದೀಪೋತ್ಸವ ಕಾರ್ಯಕ್ರಮ ಇಲ್ಲಿಗೆ ಹಮ್ಮಿಕೊಂಡು ಅಖಂಡ ಭಾರತ ಸುಭದ್ರ ರಾಷ್ಟ್ರ ನಿರ್ಮಾಣಕೆ ಕರೆ ವಿಜಯ ದಶಮಿ ನಿಮಿತ್ಯ ಯುವಕರಿಗೆ ನೀಡಲಾಗಿದೆ, ಎಂದು ಆಶ್ರಮದ
ಧರ್ಮಾಧಿಕಾರಿ ಡಾಕ್ಟರ್ ಕಾಡಯ್ಯ ಸ್ವಾಮೀಜಿ ಇವರು ಸಂಕಲ್ಪ ಮಾಡಿದರು. ಶ್ರೀ ಗುರು ಕಾಡಸಿದ್ದೇಶ್ವರ ಕಾಡೆಯ ಮಠದಲ್ಲಿ ನಿರಂತರವಾಗಿ 11 ದಿನ ವಿವಿಧ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮ ಜರುಗಿತು.

ವಿಜಯಾದಶಮಿ ನಿಮಿತ್ಯವಾಗಿ ಎಲ್ಲ ಯುವಕರಿಗೆ ಮಾತೆಯರಿಗೆ ಆಧ್ಯಾತ್ಮಿಕ ಹಾಗೂ ಅವರಲ್ಲಿ ಭಕ್ತಿಮಯ ವಾತಾವರಣ ಸೃಷ್ಟಿಸಲು ಎಲ್ಲರೂ ಪಣ ತೊಡಬೇಕು ಇದನ್ನ ಯುವಕರು, ಯುತಿಯರು, ಅಷ್ಟೇ ಅಲ್ಲದೆ ಸಣ್ಣ ಬಾಲಕರಿಗೆ ಜನ್ಮ ನೀಡಿದ ತಂದೆ ತಾಯಿ ಮುಕ್ತವಾಗಿ ಮೊಬೈಲ್ ನೀಡುತ್ತಿದ್ದಾರೆ, ಅದರಿಂದ ಮುಕ್ತಿಗೊಳಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಸ್ವಾಮೀಜಿ ಹೇಳಿದರು. ಇಂದಿನ ವಿಜ್ಞಾನ ಯುಗದಲ್ಲಿ ಪ್ರತಿಯೊಬ್ಬರ ಆಚಾರ ವಿಚಾರ ಸಂಸ್ಕೃತಿ ಉಳಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ಪ್ರಬೋಧನೆ ಮಾಡಲಾಯಿತು.

ಸಮಾರಂಭದ ದಿವ್ಯ ಸಾನಿಧ್ಯ ಶಿವಬಸವ ಸ್ವಾಮೀಜಿ ಗಂಚಿನ ಮಠ ಹಾಗೂ ಪಂಚಲಿಂಗೇಶ್ವರ ಮಠದ ಶಿವಬಸವ ಸ್ವಾಮೀಜಿ, ತೆಲಸಂಗದ ಸಂಗಮೇಶ್ವರ ಸ್ವಾಮೀಜಿ, ವಹಿಸಿಕೊಂಡು ವಿಜಯದಶಮಿ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆ ಆಶ್ರಮದ ಧರ್ಮಾಧಿಕಾರಿ ಡಾಕ್ಟರ್ ಕಾಡಯ್ಯ ಸ್ವಾಮೀಜಿ ವಹಿಸಿದರು.

ಸಂಜೆ ಸ್ವಾಮೀಜಿಗಳ ಸಾನಿಧ್ಯದಲ್ಲಿ ಪವಿತ್ರವಾದ ಶಮಿ ಪೂಜೆ ಕಾರ್ಯಕ್ರಮ ಜರುಗಿತು. ಈ ವೇಳೆ ಸರ್ವಧರ್ಮದ ಬಂಧುಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಮಠದಲ್ಲಿ ಕಳೆದ 21 ವರ್ಷಗಳಿಂದ
ನಿರಂತರ ಧಾರ್ಮಿಕ ಕಾರ್ಯಕ್ರಮ ಜರುಗುತ್ತಿದೆ ಎಂದರು.

ಈ ವೇಳೆ ಚಾಳೆಕರ್ ಗುರುಗಳು 11 ದಿನ ಪುರಾಣ ಪ್ರವಚನ ನೀಡಿದರು.
ಅಥಣಿ, ಕಾಗವಾಡ ತಾಲೂಕಿನ ಅನೇಕ ಸದ್ಭಕ್ತರು ವಿಜಯದಶಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tags:

error: Content is protected !!