ನಿರಂತರ ಮಳೆಯಿಂದಾಗಿ ಅಗ್ರಣಿ ನದಿ ಹಳ್ಳಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬಂದ ಕಾರಣ ಹಲವು ಗ್ರಾಮಗಳ ಸಂಪರ್ಕ ನಿಂತು ಹೋಗಿದೆ. ಅಥಣಿ ತಾಲೂಕಿನ ತಾವಂಶಿ-ಕಲ್ಲೂತ್ತಿ ಗ್ರಾಮಗಳ ಸಂಪರ್ಕ ಸೇತುವೆ, ಸಂಬರಗಿ-ಆಜೂರ್ ಹಾಗೂ ಕಿರಣಗಿ ಗ್ರಾಮಗಳ ಸೇತುವೆಗಳ ಮೇಲೆ ನೀರು ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿದೆ.
ನದಿ ನೀರಿನ ರಭಸಕ್ಕೆ ರೈತರ ಪಂಪ್ ಸೆಟ್, ಗಳು ಕೊಚ್ಚಿ ಹೋಗಿವೆ.ಮಹಾರಾಷ್ಟ ಗಡಿಯಲ್ಲಿ ಅಗ್ರಣಿ ನದಿ ನೀರಿನ ವೇಗ ಭಾರಿ ಪ್ರಮಾಣದಲ್ಲಿದ್ದು ರಸ್ತೆಗಳು ಸಹ ಕಿತ್ತು ಹೋಗಿವೆ. ಬಹು ಗ್ರಾಮಗಳ ಸಂಪರ್ಕ ಕಡಿತವಾಗಿದೆ.