ಅಥಣಿ:ದಸರಾ ಅಂದರೆ ಸಾಕು ಸಾಮಾನ್ಯವಾಗಿ ನೆನಪಾಗೋದು ಮೈಸೂರು ಆದರೆ ನಾಡಿದ ಉತ್ತರ ದಿಕ್ಕಿನಲ್ಲೂ ತಾಯಿ ಚಾಮುಂಡೇಶ್ವರಿ ನೆಲೆಯೂರಿದ ಈ ಪುಣ್ಯ ಸ್ಥಳದಲ್ಲಿ ಮಹಾನವಮಿ ಆಚರಣೆ ವಿಜೃಂಭನೆಯಿಂದ ಆಚರಿಸಲಾಗುತ್ತದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿ ದೇವಿ ಸನ್ನಿಧಿಲ್ಲಿ ಮಹಾನವಮಿ ಉತ್ವಸವ ನಡೆಯುತ್ತಿದೆ ಪ್ರತಿ ದಿನ ಸಾವಿರಾರು ಮುತೈದೆಯರ ಉಡಿ ತುಂಬುವ ಭಕ್ತಿ ಪರಾಕಷ್ಟೆಗೆ ಸಾಕ್ಷಿಯಾಗಿದೆ.
ಕಳೆದ ನಾಲ್ಕು ದಶಕಗಳಿಂದ ಕೃಷ್ಣ ನದಿ ದಡದಲ್ಲಿ ನೆಲೆಯೂರಿದ ತಾಯಿ ಚಾಮುಂಡೇಶ್ವರಿ ದೇವಾಲಯ ಈಗ ಅಭಿವೃದ್ದಿಯತ್ತ ಸಾಗಿದೆ. ಮಿನಿ ಅಂಬಾರಿ, ತಾಯಿ ಚಾಮುಂಡೇಶ್ವರಿ ಬೃಹತ್ ಮೂರ್ತಿ ಒಂಬತ್ತು ದಿನಗಳ ಕಾಲ ನಡೆಯುವ ನಡೆಯುವ ವಿಶೇಷ ಧಾರ್ಮಿಕ,ಸಂಸ್ಕೃತಿ ಕಾರ್ಯಕ್ರಮಗಳು ಉತ್ತರ ಕರ್ನಾಟಕದ ಜನರಿಗೆ ಮೈಸೂರು ದಸರಾ ಉತ್ಸವದಸ್ಟೆ ಮೆರಗು ನೀಡುತ್ತಿದೆ. ಇದೊಂದು ಶಕ್ತಿ ಪಿಠವಾಗಿ ಗಮನ ಸೆಳೆದಿದೆ.