Belagavi

ಹಿಂದೂ ಜಾತಿಗಳ ನಡುವೆ ಕ್ರಿಶ್ಚಿಯನ್ ಸೇರಿಸುವ ಹುಚ್ಚು ಸಾಹಸ; ಸೆ. 17 ರಂದು ಎಲ್ಲ ಸಮಾಜ ಪ್ರಮುಖರ ಸಭೆ

Share

ಹಿಂದೂ ಜಾತಿಗಳ ನಡುವೆ ಕ್ರಿಶ್ಚಿಯನ್ ಸೇರಿಸುವ ಹುಚ್ಚು ಸಾಹಸಕ್ಕೆ ಸರಕಾರ ಕೈ‌ ಹಾಕಿರುವುದು ಹಿಂದೂ ಜಾಗೃತ ವೇದಿಕೆ ಖಂಡಿಸುತ್ತದೆ ಎಂದು ಮಾಜಿ ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರಕಾರ ಜಾತಿ ಗಣತಿಯಲ್ಲಿ ಎಲ್ಲ ಹಿಂದೂ ಸಮಾಜದಲ್ಲಿ ಕ್ರಿಶ್ಚಿಯನ್ ಸಮಾಜ ಸೇರಿಸಿ ಹುಚ್ಚು ಸಾಹಸ ಮಾಡಿದೆ. ಹಿಂದೂ ಸಮಾಜದ ಅನೇಕ ಧರ್ಮಗಳನ್ನು ಜಾತಿ ಗಣತಿಯಲ್ಲಿ ಕ್ರಿಶ್ಚಿಯನ್ ಎಂಬ ಪದಬಳಕೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದರು.

ಅಕ್ಕಸಾಲಿಗ, ಬಂಜಾರ, ಗೊಲ್ಲ, ಜಂಗಮ, ಕುರುಬ, ಲಂಬಾಣಿ, ಮಾಂಗ, ನೇಕಾರ, ರೆಡ್ಡಿ, ಶೆಟ್ಡರು, ವಾಲ್ಮೀಕಿ ಸೇರಿ 46 ಜಾತಿಗಳ ಹಿಂದೆ‌‌ ಕ್ರಿಶ್ಚಿಯನ್ ಜಾತಿ ನಮೂದನೆ ಮಾಡಿರುವ ಹಿಂದುಳಿದ ಆಯೋಗದ ಕ್ರಮದ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದರು.
ಬಿಜೆಪಿ ಮುಖಂಡ ಎಂ. ಬಿ.ಜೀರಲಿ ಮಾತನಾಡಿ, ಸಂವಿಧಾನದಲ್ಲಿ ಸಮಾಜಿಕ ನ್ಯಾಯ ಕೊಡಿಸುವಲ್ಲಿ ಮೀಸಲಾತಿ ಅತ್ಯವಶ್ಯಕವಾಗಿದೆ. ಸಮಾಜ ಕಲ್ಯಾಣ ಇಲಾಖೆಯವರು ಸಮೀಕ್ಷೆ ಮಾಡಿ ಸರಕಾರಕ್ಕೆ ಕೊಡಬೇಕು. ಆದರೆ ರಾಜ್ಯ ಸರಕಾರ ಕಾಂತರಾಜು ವರದಿಯನ್ನು ಸ್ವೀಕರಿಸಲು ಹಿಂದೆಟ್ಟು ಹಾಕಿದೆ. ಸಮೀಕ್ಷೆ ಮಾಡಲು ನಮ್ಮ‌ ವಿರೋಧ ಇಲ್ಲ. ಆದರೆ ಅದರ ರೀತಿ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸರಕಾರ ನೇರವಾಗಿ ಗಣತಿಯ ಹೆಸರಿನಲ್ಲಿ ಮತಾಂತರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಹರಿಹಾಯ್ದರು.
ಸೆ.17 ರಂದು ಮಹಾತ್ಮ ಗಾಂಧಿ ಭವನದಲ್ಲಿ ಬೆಳಗ್ಗೆ 10.30ಕ್ಕೆ ಎಲ್ಲ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ. ಬಳಿಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿನೋದ್ ದೊಡ್ಡಣ್ಣವರ, ಈರಣ್ಣಾ ದಯಾನಂದವರ, ದಿಗಂಬರ ಪವಾರ್, ಮಹಾದೇವ ರಾಠೋಡ್, ಸಂದೀಪ್‌ ಜೀರಗ್ಯಾಳ, ರೋಹನ್ ಜವಳಿ, ರಾಜೇಂದ್ರ ‌ಮುತಗೇಕರ್, ಆರ್.ಎಸ್.ಮುತಾಲಿಕ್, ಅನಂತ ಲಾಡ್, ಚಂದ್ರಶೇಖರ ಸವಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!