ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಿನ್ನಲೆಯಲ್ಲಿ ಕಟಬಾಕಿ ದಾರರಿಗೆ ಸಪ್ಟಂಬರ 7 ನೇ ತಾರಿಖು ಕೋನೆಯದಾಗಿತ್ತು ಆದರೆ ಕೇವಲ ಎರಡೆ ದಿನಗಳಲ್ಲಿ ಸುಮಾರು 44 ಲಕ್ಷ ರೂಪಾಯಿ ಜಮೆ ಯಾಗಿದ್ದು ಅದರಲ್ಲಿ ಸಚಿವ ಸತೀಶ ಜಾರಕಿಹೋಳಿ ಬೆಂಬಲಿತ ಗ್ರಾಹಕರು ಹೇಚ್ಚನ ಸಂಖ್ಯೆಯಲ್ಲಿ ಬಿಲ್ ಭರಣಾ ಮಾಡಿದರೆ ರಮೇಶ್ ಕತ್ತಿ ಬೆಂಬಲಿತ ಗ್ರಾಹಕರು ಸಹ ಬಿಲ್ ಭರಣಾ ಮಾಡಿ ಎರಡು ಗುಂಪಿನ ಬೆಂಲಿತ ಗ್ರಾಹಕರಲ್ಲಿ ಅತಿ ಹೆಚ್ಚು ಖಟಬಾಕಿ ಬಿಲ್ ಪಾವತಿ ಮಾಡಿದ್ದು ಸಚೀವರ ಮತ್ತು ಸದ್ಯದ ಆಡಳಿತ ಮಂಡಳಿ ಸದಸ್ಯರ ಗ್ರಾಹಕ ರಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸಂಘದ ಕಛೇರಿಯಲ್ಲಿ ಗ್ರಾಹಕರು ಕಟಬಾಕಿ ಬಿಲ್ ಭರಣಾ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಹಕ್ಕು ಪಡೆಯಲು ಬಾಕಿ ಬಿಲ್ ತುಂಬುವ ಕೋನೆಯ ಎರಡು ದಿನಗಳಲ್ಲಿ ಕಟಬಾಕಿದಾರರು 44 ಲಕ್ಷ ರೂಪಾಯಿ ಬಿಲ್ ತುಂಬುವ ಮೂಲಕ ಮತದಾನ ಹಕ್ಕು ಪಡೆದಿದ್ದಾರೆ, ಆದರೆ ಚುನಾವಣೆಯಲ್ಲಿ ಯಾರು ಯಾರಿಗೆ ಮತದಾನ ಹಾಕುತ್ತಾರೆ ಎಂಬುವದು ಮತದಾರನ ವಿವೇಚನೆಗೆ ಬಿಟ್ಟಿರುತ್ತದೆ.

