ಇಂದು ಒಂಬತ್ತು ದಿನ ಗಣೇಶ ಮೂರ್ತಿ ವಿಸರ್ಜನೆಗೆ ಪೇಡಾ ನಗರಿ ಧಾರವಾಡ ಸಜ್ಜಾಗಿದ್ದು, ಮಾಳಾಪುರ ಗಣೇಶೋತ್ಸವವು ಈ ಬಾರಿ ಸೌರ್ಹಾದತೆಗೆ ಸಾಕ್ಷಿಯಾಗಿದೆ. ಗಣೇಶ ಮೂರ್ತಿಗೆ ಮುಸ್ಲಿಂ ಮುಖಂಡರು ಮಾಲಾರ್ಪಣೆ ಮಾಡಿದ್ದು, ಮಸೀದಿ ಮುಂಭಾಗಕ್ಕೆ ವಿಸರ್ಜನೆ ಮೆರವಣಿಗೆ ಬರುತ್ತಿದಂತೆ ಡಿಜೆಯಲ್ಲಿ ಭಾವೈಕ್ಯತೆ ಹಾಡು ಹಾಕುವ ಮೂಲಕ ಗಣೇಶ ಮಂಡಳಿ ಭಾವೈಕ್ಯತೆ ಮೇರೆದಿದ್ದಾರೆ.

ಹೌದು ಧಾರವಾಡದ ಮಾಳಾಪುರ ಗಣೇಶ ಮೂರ್ತಿ ಒಂಬತ್ತು ದಿನ ಪೂರೈಸಿದ ಹಿನ್ನಲೆಯಲ್ಲಿ, ಇಂದು ಮೂರ್ತಿ ವಿಸರ್ಜನೆ ಮೆರವಣಿಗೆ ಗಣಪತಿಯನ್ನು ಹೊರ ತರುತ್ತಿದಂತೆ ಮಾಳಾಪುರ ಮುಸ್ಲಿಂ ಮುಖಂಡರೆಲ್ಲರು ವಿಘ್ನ ನಿವಾರಕನ ಮೂರ್ತಿಗೆ ಪೂಜೆ ಸಲ್ಲಿಸಿ ಹೂವಿನ ಹಾರ ಹಾಕಿ ಭಾವೈಕ್ಯ ಮತೆ ಮೆರೆದರು. ಇನ್ನೂ ಗಣಪತಿ ಮಂಡಳಿಯು ಡಿಜೆ ಮೂಲಕ ವಿಸರ್ಜನೆ ಮೆರವಣಿಗೆ ಮಸೀದಿ ಬಳಿ ಬರುತ್ತಿದಂತೆ ಗಣಪತಿ ಮಂಡಳಿ ಹಿಂದೂ ಮುಸ್ಲಿಂ ಸೌರ್ಹಾದತೆ ಸಾರುವ ಹಾಡನ್ನು ಪ್ಲೈ ಮಾಡುವ ಮೂಲಕ ಮಾದರಿಯಾದರು. ಇನ್ನೂ ಈ ವೇಳೆ ಸ್ಥಳದಲ್ಲೇ ಇದ್ದು ಉಪನಗರ ಠಾಣೆಯ ಇನ್ಸ್ಪೆಕ್ಟರ್ ದಯಾನಂದ ಶೆಗುಣಸಿ ಪೊಲೀಸ್ ಬಿಗಿ ಬಂದೋಬಸ್ತ ಒದಗಿಸಿ ಹಿಂದು ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗುವಂತೆ ನೋಡಿಕೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.