londa

ಮೃತ್ಯುಕೂಪದಂತೆ ತೋರುತ್ತಿದೆ ಲೋಂಡಾಫಾಟಾ ರಸ್ತೆ…!!!

Share

ಬೆಳಗಾವಿ ಪಣಜಿ ಮಾರ್ಗದ ದುರಾವಸ್ಥೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಅಪಾಯಕಾರಿ ರಸ್ತೆಯ ಪರಿಸ್ಥಿತಿಯ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಹೌದು, ಬೆಳಗಾವಿ ಪಣಜಿ ಹೆದ್ದಾರಿಯ ಲೋಂಡಾಫಾಟಾ ಹತ್ತಿರದ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತ್ಯಂತ ಭಯಂಕರವಾಗಿದೆ. ಮಳೆಯ ಹಿನ್ನೆಲೆ ರಸ್ತೆಯಲ್ಲಿ ನಿರ್ಮಾಣಗೊಂಡ ಬೃಹತ್ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಅಭಿವೃದ್ಧಿ ಕಾಣದ ರಸ್ತೆಯ ತುಂಬ ಕೆಸರುಮಯ ವಾತಾವರಣ ನಿರ್ಮಾಣವಾಗಿದ್ದು,

ವಾಹನ ಸವಾರರು ಹಾಗೂ ಇದೇ ಮಾರ್ಗದ ಮೂಲಕ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಕೈಯಲ್ಲಿ ಜೀವವನ್ನ ಹಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ. ಹಲವಾರು ಬಾರಿ ವಾಹನಗಳು ಸಿಕ್ಕಿ ಹಾಕಿಕೊಂಡು ಅಪಘಾತಗಳು ಕೂಡ ಸಂಭವಿಸುತ್ತಿವೆ. ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ. ಹೆದ್ದಾರಿ ಪ್ರಾಧಿಕಾರವು ಯಾವುದೇ ಸೂಚನಾ ಫಲಕಗಳನ್ನು ಕೂಡ ಅಳವಡಿಸಿಲ್ಲ. ಇದರಿಂದಾಗಿ ವಾಹನ ಸವಾರರು ಗೊಂದಲಕ್ಕಿಡಾಗುತ್ತಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡಿಯೋಣ ನಮ್ಮ ವರದಿಗಾರರಿಂದ.

Tags:

error: Content is protected !!