ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತ್ರೀವಳಿ ಮಕ್ಕಳಗಳಿಗೆ ಜನ್ಮ ನೀಡಿದ್ದು, ಅದರಲ್ಲಿ ಎರಡು ಹೆಣ್ಣು ಹಾಗೂ ಒಂದು ಗಂಡು ಮಗು ಜನನವಾದ ಅಪರೂಪದ ಘಟನೆಯೊಂದು ಇಂದು ಹುಬ್ಬಳ್ಳಿಯಲ್ಲಿ ನಡೆದಿದೆ.
ವರ್ಷಿಣಿ ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿಯಾಗಿದ್ದಾಳೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನ್ನವಳ್ಳಿ ಪಟ್ಟಣದ ನಿವಾಸಿಗಿರೋ ಪಂಚಾಕ್ಷರಿ ಹಾಗೂ ವರ್ಷಿಣಿ ದಂಪತಿಗೆ, ಈಗಾಗಲೇ 6 ವರ್ಷದ ಒಂದು ಹೆಣ್ಣು ಮಗಳು ಹೊಂದಿದ್ದಾರೆ. ನಂತರ ಗರ್ಭಿಣಿಯಾಗಿದ್ದ ವರ್ಷಿಣಿಯವರಿಗೆ ಡೆಲಿವರಿ ಪೇನ್ ಕಾಣಿಸಿಕೊಂಡ ಹಿನ್ನಲೆಯಲ್ಲೆ ಪತಿ ಸೇರಿ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜತೆಗೆ ಈ ಮೊದಲೇ ತಪಾಸಣೆ ವೇಳೆ ತ್ರೀವಳಿ ಮಕ್ಕಳಿರುವ ಮಾಹಿತಿಯನ್ನು ವೈದ್ಯರು ವರ್ಷಿಣಿ ಪಂಚಾಕ್ಷರಿ ದಂಪತಿಗಳಿಗೆ ನೀಡಿದ್ದರು. ಈಗ ವರ್ಷಣಿಯವರಿಗೆ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಸುಧಾ ಹಳೇಮಣಿ ನೇತೃತ್ವದಲ್ಲಿ ತಂಡ ಮೂವರು ಮಕ್ಕಳ ಯಶಸ್ವಿ ಡೆಲಿವರಿ ಮಾಡಿಸಿದ್ದು, ಜನನವಾದ ಮೂವರು ಮಕ್ಕಳು ಸೇರಿ ಬಾಣಂತಿ ತಾಯಿ ವರ್ಷಣಿ ಆರೋಗ್ಯವಾಗಿದ್ದಾರೆ. ಇನ್ನು, ತ್ರೀವಳಿ ಮಕ್ಕಳ ಜನನದಿಂದ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.