Vijaypura

ಪೊಲೀಸರು ಕೆಲಸ ಮಾಡ್ತಿದ್ದಾರೆ, ಮಾಡಲು ಬಿಡಿ, ಪ್ರಕರಣ ತನಿಖೆಯನ್ನ ರಾಜಕೀಕರಣಗೊಳಿಸಬೇಡಿ: ಸಚಿವ ಸತೀಶ ಜಾರಕಿಹೊಳಿ

Share

SIT ತನಿಖೆಯಲ್ಲಿ ಸೌಜನ್ಯ ಪ್ರಕರಣ ಪ್ರತ್ಯೇಕವಾಗಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು. ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲಾ, SIT ಮಾಡಿದ್ದಾರೆ, ತನಿಖೆ ಮಾಡಲಿ, ಎರಡೂ ಪ್ರಕರಣ ನ್ಯಾಯಾಲಯಕ್ಕೆ ಹೋಗುತ್ವೆ, ಅಂತಿಮ ತೀರ್ಪು ಬರಲಿ ನೋಡೋಣ ಎಂದರು. ಇನ್ನೂ ಸರ್ಕಾರ ಸೂಕ್ತ ನಿರ್ಧಾರ ಮಾಡುತ್ತೆ.. ಎಲ್ಲರಿಗೂ ನ್ಯಾಯ ಸಿಗಲಿ ಎನ್ನುವ ದೃಷ್ಟಿಯಿಂದಲೇ ತೀರ್ಮಾನ ಮಾಡ್ತಾರೆ…

ಕಾದು ನೋಡೋಣ ಎಂದರು. ಧರ್ಮಸ್ಥಳ ನಿಗೂಢ ಹತ್ಯೆಗಳ ತನಿಖೆಗೆ ಎಸ್‌ಐಟಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಪೊಲೀಸರು ಕೆಲಸ ಮಾಡ್ತಿದ್ದಾರೆ, ಮಾಡಲು ಬಿಡಿ, ಪ್ರಕರಣ ತನಿಖೆಯನ್ನ ರಾಜಕೀಕರಣಗೊಳಿಸಬೇಡಿ ಅಡ್ವಾನ್ಸ್ ಜಜ್ಡ್‌ಮೆಂಟ್ ಬರೆಯುವ ಅವಶ್ಯಕತೆ ಇಲ್ಲಾ, ತನಿಖೆ ಮಾಡಲಿ, ಏನು ಸತ್ಯಾಂಶ ಹೊರಗೆ ಬರುತ್ತೆ ನೋಡೋಣ ಎಂದರು. ಇನ್ನೂ ತನಿಖೆ ಮೂಲಕ ಸನಾತನ ಧರ್ಮದ ಮೇಲೆ ದಾಳಿ ; ಬಿಜೆಪಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಚುನಾವಣೆಯಲ್ಲಿ ಈ ರೀತಿ ಹಬ್ಬಿಸೋದು ಕಾಮನ್, ಚುನಾವಣೆ 6 ತಿಂಗಳು ಇರೋವಾಗ ಶುರು ಮಾಡ್ತಾರೆ, ಆದ್ರೆ ಈಗ ಮೂರು ವರ್ಷ ಮುಂಚೆಯೆ ಶುರು ಮಾಡಿದ್ದಾರೆ, ಇದೆನು ಹೊಸದಲ್ಲ, ಹಿಂದೆ ಕರಾವಳಿಯಲ್ಲಿ ಹಿಂದೂಗಳ ಹತ್ಯೆ ಎಂದ್ರು, ಸಿಬಿಐ, ಎಸ್‌ಐಟಿ ರಚನೆ ಮಾಡಿದ್ರು,

ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದ್ರು. ಇನ್ನೂ ಸಿಎಂ-ಡಿಸಿಎಂ ನಡುವೆ ಮುಸುಕಿನ ಗುದ್ದಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಅದು ಮುಗಿದ ಹೋದ ವಿಚಾರ, ಸ್ವತಃ ಸಿಎಂ ಹೇಳಿದ್ದಾರಲ್ಲಾ, ಮುಸುಕಿನ ಗುದ್ದಾಟ ಪ್ರಶ್ನೆಯೆ ಬರೋದಿಲ್ಲಾ ಎಂದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಅದು ನಮ್ಮ ಹಂತದಲ್ಲಿ ಇಲ್ಲಾ, ಹೈಕಮಾಂಡ್ ನಿರ್ಧಾರ ಮಾಡುತ್ತೆ, ಟೈಂ ಬಂದಾಗ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡ್ತಾರೆ, ಸೂಕ್ತ ಸಮಯದಲ್ಲಿ ವರಿಷ್ಠರು ನಿರ್ಧಾರ ಮಾಡ್ತಾರೆ ಎಂದರು. ಇದನ್ನ ನಾವ್ ಹೇಳೋಕೆ ಆಗಲ್ಲಾ, ಕಾದು ನೋಡೋಣ ಎಂದರು. ಅಲ್ಲದೇ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಬಿರುಗಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡಬೇಕು, ಸಿಎಂ ಈಗಾಗಲೇ ನಾನೇ 5 ವರ್ಷ ಇರ್ತಿನಿ ಎಂದಿದ್ದಾರೆ.

ಜಾಗ ಖಾಲಿ ಇಲ್ಲ‌ ಎಂದು ಸ್ವತಃ ಡಿಸಿಎಂ ಹೇಳಿದ್ದಾರೆ. ಅವರೇ ಹೊಂದಾಣಿಕೆ ಆಗಿದ್ದಾರೆ, ನಾವೇನು ಹೇಳೋದು ಇದೆ ಎಂದರು. ಇನ್ನೂ ಸತೀಶ್ ಅಭಿಮಾನಿಗಳಿಂದ ಸಿಎಂ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಅದೆಲ್ಲ ಏನೀಲ್ಲಾ, ನಾನು ಯಾವತ್ತೂ ಅದನ್ನ ಕ್ಲೈಮ್ ಮಾಡಿಯೇ ಇಲ್ಲಾ, ಅದರ ಬಗ್ಗೆ ನಾನು ಯಾವತ್ತೂ ಹೇಳಿಯೇ ಇಲ್ಲಾ, ನಾನು ವಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗ್ತೇನೆ ಎಂದರು. ನಮ್ಮ ಡಿಪಾರ್ಟ್ಮೆಂಟ್ ಕೆಲಸದ ಮೇಲೆ ಹೋಗ್ತಲೇ ಬೇಕಾಗುತ್ತೆ ಹೋಗ್ತೇವೆ, ಅದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲಾ ಎಂದರು. ಇನ್ನೂ ಇದೇ ವೇಳೆ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಅಭಿಮಾನಿಗಳು ಘೋಷಣೆ ಕೂಗಿದರು.

Tags:

error: Content is protected !!