Hukkeri

ಹುಕ್ಕೇರಿ : ಶಿಕ್ಷಕರನ್ನು ಕೂಲಿ ಕಾರ್ಮಿಕರಂತೆ ಕಾಣಬೇಡಿ – ಎಸ್ ಎಸ್ ಮಠದ

Share

ಹುಕ್ಕೇರಿ :  ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲೆಗಳ ಶಿಕ್ಷಕರನ್ನು ಕೂಲಿ ಕಾರ್ಮಿಕರ ಗಿಂತ ಕಿಳಾಗಿ ಕಾಣುತ್ತಿರುವದು ಖಂಡನಿಯವಾಗಿದೆ ಎಂದು ಪ್ರೌಢ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಎಸ್ ಎಸ್ ಮಠದ ಹೇಳಿದರು.
ಹುಕ್ಕೇರಿ ತಾಲೂಕಿನ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಎಸ್ ಎಸ್ ಮಠದ ನೇತೃತ್ವದಲ್ಲಿ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಹುಕ್ಕೇರಿ ತಹಶೀಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಶಿಕ್ಷಕರ ಸಂಘದ ಅದ್ಯಕ್ಷ ಮಠದ ಮಾತನಾಡಿ ಕಳೆದ 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅನುದಾನ ರಹಿತ ಶಾಲೆಗಳಿಗೆ ರಾಜ್ಯ ಸರ್ಕಾರ ಅನುದಾನ ಕಲ್ಪಸಬೇಕು,ಶಾಲಾ ಆಡಳಿತ ಮಂಡಳಿಯವರು ಕಟ್ಟಡ, ಪೀಠೋಪಕರಣ ಸೇರಿದಂತೆ ಶಿಕ್ಷಕರಿಗೆ ಅಲ್ಪ ಸ್ವಲ್ಪ ಗೌರವ ಧನ ಕೊಡುತ್ತಾರೆ ಆದರೆ ಆ ಹಣ ಕೂಲಿ ಕಾರ್ಮಿಕರಿಗಿಂತ ಕಡಿಮೆ ಬರುತ್ತಿದೆ ,ಕಾರಣ ರಾಜ್ಯ ಸರ್ಕಾರ ಅನುದಾನ ರಹಿತ ಶಾಲೆಗಳಿಗೆ ಅನುದಾನ ನೀಡಿಬೇಕು ಎಂದು ಆಗ್ರಹಿಸಿದರು
ನಂತರ ಉಪ ತಹಸಿಲ್ದಾರ ಅನಿತಾ ತೋಟಗಿ ಯವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತೋಟಗಿ ಶಿಕ್ಷಕರು ನೀಡಿದ ಮನವಿಯನ್ನು ಮೇಲಾಧೀಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ತಲುಪಿಸಲಾಗುವದು ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಶಿಕ್ಷಕರು ಶಾಲೆಗಳಿಗೆ ಮರಳ ಬೇಕು ಎಂದರು
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಅರುಣ್ ವಾಘ, ರಮೇಶ್ ಗುಡೖಯನ್ನವರ, ಎಸ್ ಬಿ ಜಿನರಾಳಿ, ಎಸ್ ಬಿ ಮಠಪತಿ, ಎಸ್ ಆರ್ ಢೂಗ, ಕೆ ಎ ಕುಂಬಾರ್, ಎಸ್ ಎ ಪೂಜಾರಿ, ಎಸ್ ಡಿ ಚೌಗಲಾ ಎಸ್ ಟಿ ಪಾಟೀಲ್ ರಮೇಶ್ ಪಾಟೀಲ್ , ಆರ್ ಸಿ ಬಾಗೇವಾಡಿ, ರಾಜು ಹೊಳ್ಲಾಪಗೋಳ , ಸಾಗರ್ ಮಾಳಿಗೆ ಸಿಂಧೆ ಮತ್ತು ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕ ವರ್ಗದವರು ಹಾಜರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!