ದೇಶಕ್ಕೆ ಅನ್ನ ನೀಡುವ ಅನ್ನದಾತರು ರೈತರು ಹುತಾತ್ಮ ರೈತರನ್ನು ನಾವು ಸ್ಮರಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಸುರೇಶ್ ಪರಗನ್ನವರ್ ಹೇಳಿದರು
ಸೋಮವಾರ 45 ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದವರು ಹಮ್ಮಿಕೊಂಡಿದ ರೈತ ಹುತಾತ್ಮ ದಿನಾಚರಣೆಯಲ್ಲಿ ರೈತ ವೃತ್ತದಲ್ಲಿ ಹುತಾತ್ಮ ರೈತರಿಗೆ ಶ್ರದ್ಧಾಜಂಲಿ ಸಲ್ಲಿಸಿದ ಬಳಿಕ ಗಾಂಧಿ ನಗರದಲ್ಲಿರುವ ಕರ್ನಾಟಕ ರಾಜ್ಯ ರೈತ ಸಂಘ ಮುಖ್ಯ ಕಚೇರಿವರೆಗೆ ಪಾದಯಾತ್ರೆಯ ನಡೆಸುವ ಮೂಲಕ ಆಗಮಿಸಿದ ನೂರಾರು ರೈತ ಮುಖಂಡರು ಮಹಿಳಾ ರೈತರು 45ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮರಾದ ರೈತರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿ ರೈತರಿಗೆ ನಮನ ಸಲ್ಲಿಸಲಾಯಿತು
ರೈತ ಸಂಘದ ರಾಜ್ಯಾಧ್ಯಕ್ಷ ಸುರೇಶ್ ಪರಗನ್ನವರ್ ಮಾತನಾಡಿ ದೇಶಕ್ಕೆ ಅನ್ನ ನೀಡುವ ಅನ್ನದಾತರು ರೈತರು ಹುತಾತ್ಮ ರೈತರನ್ನು ನಾವು ಸ್ಮರಿಸಬೇಕು 1980ರ ಸಮಯದಲ್ಲಿ ನೀರಿಗಾಗಿ ರೈತ ಚಳುವಳಿ ಆರಂಭವಾಯಿತು ಚಳುವಳಿ ತೀವ್ರಗೊಂಡಾಗ ಅಂದಿನ ಸರ್ಕಾರ ಗೋಲಿಬಾರ ನಡೆಸಿದಾಗ ಇಬ್ಬರು ರೈತರು ಪ್ರಾಣ ಬಲಿದಾನಗೊಂಡರು ಆ ದಿನ ರೈತ ಸಂಘದ ಹಿರಿಯರು ಪ್ರತಿವರ್ಷ ಹುತಾತ್ಮ ರೈತರನ್ನು ನೆನಪಿಸಿಕೊಳ್ಳಲು ರೈತ ಹುತಾತ್ಮ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು
ರೈತ ಮುಖಂಡ ರಾಘವೇಂದ್ರ ನಾಯಕ ಮಾತನಾಡಿ, ಹುತಾತ್ಮರಾಗಿರುವ ರೈತರಿಗೆ ನಾವು ಎಷ್ಟು ಶ್ರದ್ಧಾಜಂಲಿ ಸಲ್ಲಿಸಿದರು ಸಾಲದು ಅವರ ತ್ಯಾಗ ಬಲಿದಾನ ನಮ್ಮಗೆ ಪ್ರೇರಣೆ ಎಂದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಅಧಿಕಾರಿ ರವಿ ಬಂಗಾರಪ್ಪನ್ನವರ, ಅಡವೆಪ್ಪ ಇಟಗಿ, ಜಾವೇದ್ ಮುಲ್ಲಾ, ಜಯ ಕುಲಕರ್ಣಿ, ಭಾರತಿ ಪಾಟೀಲ್ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು