ಮಹದಾಯಿ ಕಳಸಾ ಬಂಡೂರಿ ಹೋರಾಟ ಅವಿಸ್ಮರಣೀಯ, ನಮ್ಮ ಹಕ್ಕಿಗಾಗಿ ಮಾಡಿದ ಹೋರಾಟದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಬಲಿಯಾದ ರೈತರಿಗೆ ಗೌರವ ಸೂಚಿಸುವದು ನಮ್ಮ ಕರ್ತವ್ಯ ಎಂದು ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಲಿಂಗರಾಜ ವೃತ್ತದಲ್ಲಿ ಇರುವ ರೈತ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಈ ಹೋರಾಟ ಪ್ರಾರಂಭವಾಗಿ 45ವರ್ಷ ಗತಿಸಿದರೂ ಸಹಿತ ಇನ್ನೂ ಫಲ ನೀಡದೇ ಇರುವದು ವಿಷಾದನೀಯ. ಸರಕಾರಗಳು ತಮ್ಮ ತಮ್ಮ ಪ್ರತಿಷ್ಠೆ ಬಿಟ್ಟು ಯೋಜನೆ ಜಾರಿ ಮಾಡಲು ಶ್ರಮಿಸಬೇಕು. ಅಲ್ಲದೇ ಬೆಳೆಹಾನಿ, ಬೆಳೆ ಪರಿಹಾರ ವಿಷಯದಲ್ಲಿ ನಾವೆಲ್ಲಾ ಕೂಡಿ ನಮ್ಮ ಹಕ್ಕು ನಾವು ಪಡೆಯಲು ಹೋರಾಟ ಮಾಡೋಣ ಎಂದು ಕರೆ ನೀಡಿದರು.