ಹುನಗುಂದ ಶಾಸಕ ವಿಜಯಾನಂದ ಕಾಸಪ್ಪನವರ ವಿರುದ್ಧ ಯತ್ನಾಳ ಕಿಡಿಕಾರಿದ್ದಾರೆ. ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿ ಕಾಶಪ್ಪನವರನ್ನು ಅಯೋಗ್ಯ ಎಂದು ಕಿಡಿಕಾರಿದ್ದಾರೆ. ಸುಖಾಸುಮ್ಮನೆ ಕಾಶಪ್ಪನವರನ್ನು ಮಾಧ್ಯಮಗಳು ಹಿರೋ ಮಾಡುತ್ತಿವೆ, ಅಂತಹ ಲೋಫರ್ಗಳನ್ನು ಹೀರೋ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.
ನಾನು ಸಿದ್ದೇಶ್ವರ ಶ್ರೀಗಳ ಕಾಲು ನಮಸ್ಕಾರ ಮಾಡಿದ್ದೇನೆ, ಉಳಿದ ಸ್ವಾಮಿಗಳಿಂದ ನಾನೇನು ಲಾಭ ಪಡೆದುಕೊಂಡಿಲ್ಲಾ, ಕೆಲವರು ಸ್ವಾಮಿಗಳಿಗೆ ಹಣ ನೀಡಿ ಮಂತ್ರಿ ಸ್ಥಾನ ಪಡೆದಿದ್ದಾರೆ, ಅಂತಹ ಕೆಲಸ ನಾನು ಮಾಡಿಲ್ಲಾ ಎಂದರು. ಇನ್ನೂ ಪೀಠಗಳು ಜಾಸ್ತಿ ಮಾಡುವುದರಿಂದ ಭಕ್ತರಿಗೆನೇ ತೊಂದರೆ ಎಂದರು.