ಬೆಳಗಾವಿ ಯುವ ನ್ಯಾಯವಾದಿ ಬೆಳಗಾವಿ ಬಾರ್ ಅಸೋಸಿಯೇಷನ್ (ಬಿಬಿಎ) ನ ಮಾಜಿ ಕೌನ್ಸಿಲ್ ಸದಸ್ಯ ಸುಭಾಷ್ ದೇಸಾಯಿ ಭಾನುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರ ಸಾವು ಕಾನೂನು ವೃತ್ತಿ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.
ಹೃದಯಾಘಾತದಿಂದ ಬಳಲುತ್ತಿದ್ದ ಸುಭಾಷ್ ದೇಸಾಯಿ ಅವರನ್ನು ತಕ್ಷಣ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಸುಭಾಷ್ ದೇಸಾಯಿ ಹಿರಿಯ ವಕೀಲ ಆರ್. ಜಿ. ಪಾಟೀಲ್ ಅವರ ಹತ್ತಿರ ಜ್ಯೂನಿಯರ್ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತ ಬೆಳಗಾವಿ ಬಾರ್ ಅಸೋಸಿಯೇಷನ್ ಕೌನ್ಸಿಲ್ ಸದಸ್ಯರಾಗಿಯೂ ಗಮನಾರ್ಹ ಕೊಡುಗೆಗಳನ್ನು ನೀಡಿದ್ದರು. ಅವರು ಅತ್ಯಂತ ಸ್ನೇಹಪರ ಮತ್ತು ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿ ಎಂದು ಹೆಸರು ವಾಸಿಯಾಗಿದ್ದರು.ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ 6 ಗಂಟೆಗೆ ಕಾಕತಿಯಲ್ಲಿ ನಡೆಸಲಾಗುವುದು