ಪಂಚಮಸಾಲಿ ಪೀಠದ ಶ್ರೀಗಳು ಆರೋಗ್ಯದಲ್ಲಿ ತಾತ್ಕಾಲಿಕ ಏರುಪೇರಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಆರಾಮವಾಗಿದ್ದಾರೆ. ಭಯಪಡುವ ಅವಶ್ಯಕತೆಯಿಲ್ಲವೆಂದು ಕಲಬುರ್ಗಿಯ ಪಂಚಮಸಾಲಿ ಜಿಲ್ಲಾ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ತಿಳಿಸಿದ್ದಾರೆ,
ಕಲಬುರ್ಗಿಯಲ್ಲಿ ಮಾತನಾಡಿದ ಅವರು “ನಿನ್ನೆ ಮಧ್ಯಾಹ್ನ ಶ್ರೀಗಳಿಗೆ ಫುಡ್ ಪಾಯಿಸನ್ ಆಗಿದ್ದು, ತಕ್ಷಣವೇ ಡಾಕ್ಟರ್ ಸಲಹೆ ಪಡೆದ ನಂತರ ಮಾತ್ರೆ ಸೇವಿಸಿದರು. ರಾತ್ರಿ ಸ್ವಲ್ಪ ಚೇತರಿಸಿಕೊಂಡರೂ ಬೆಳಿಗ್ಗೆ ಮತ್ತೆ ತಲೆನೋವು, ವಾಂತಿ ಹಾಗೂ ಎದೆನೋವು ಕಾಣಿಸಿಕೊಂಡ ಕಾರಣದಿಂದಾಗಿ ಅವರು ಅಸ್ವಸ್ಥರಾದರು.” ಭಕ್ತರು ಆಸ್ಪತ್ರೆಗೆ ಹೋಗೋಣ ಎಂದು ಮನವಿ ಮಾಡಿದ ನಂತರ, ಶ್ರೀಗಳು ಬಾಗಲಕೋಟೆ ಆಸ್ಪತ್ರೆಗೆ ಕರೆ ತರಲಾಯಿಗಗೆ. “ಭಕ್ತರು ಭಯಪಡಬೇಕಾದ್ದು ಏನಿಲ್ಲ, ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಸ್ವಲ್ಪ ಆರೋಗ್ಯ ಏರುಪೇರು ಆಗಿದ್ದರಿಂದಲೇ ನಾವು ಆಸ್ಪತ್ರೆಗೆ ಬಂದಿದ್ದೇವೆ,” ಎಂದು ಮಲ್ಲನಗೌಡ ಪಾಟೀಲ್ ತಿಳಿಸಿದ್ದಾರೆ.