ಆರ್ ಸಿ ಬಿ ಸಂಭ್ರಮದ ವೇಳೆ ಕಾಲ್ತುಳಿದ ಬಗ್ಗೆ ನ್ಯಾಯಮೂರ್ತಿಗಳು ವರದಿ ನೀಡಿದ್ದಾರೆ ಆ ಸಮಯದಲ್ಲಿ ಯಾವುದೇ ಇಲಾಖೆಗಳಿಂದ ಅನುಮತಿ ಪಡೆದುಕೊಂಡಿಲ್ಲ ಬಹಳಷ್ಟು ಜನರು ಸೇರುವ ಕಾರ್ಯಕ್ರಮವಾಗಿತ್ತು ಭದ್ರತೆ ನೀಡುವರು ಪೊಲೀಸರು ಅವರಿಂದಲೂ ಅನುಮತಿ ಪಡೆದಿಲ್ಲ ನ್ಯಾಯಮೂರ್ತಿಗಳ ದೊಡ್ಡ ವರದಿ ಇದೆ ಅದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಅದರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಸತೀಶ ಜಾರಕಿಹೋಳಿ ತಿಳಿಸಿದರು
ಶುಕ್ರವಾರ ಬೆಳಗಾವಿ ಮಹಾನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಡಕಲ್ ಜಲಾಶಯದಿಂದ ಈ ಹಿಂದೆ ನದಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬೀಡಲಾಗಿತ್ತು ಈಗಾ ಹೆಚ್ಚಿಗೆ ಬಿಟ್ಟಿರಬಹುದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ ಸುರ್ಜೆವಾಲಾ ಭೇಟಿ ಸಮಯದಲ್ಲಿ 2 ವರ್ಷದಲ್ಲಿ ನಮ್ಮ ಇಲಾಖೆಯಿಂದ ನಾವು ಕೈಗೊಂಡಿರುವ ಕೆಲಸಗಳು, ಶಾಸಕರಿಗೆ ಅನುದಾನ ಎಷ್ಟು ಕೋಟ್ಟಿದ್ದೇವೆ ಎಂಬುದರ ಬಗ್ಗೆ ಚರ್ಚೆಯಾಗಿದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆಯಾಗಿಲ್ಲ ಅಭಿವೃದ್ಧಿಯ ಕುರಿತು ಮಾತ್ರ ಚರ್ಚಿಸಲಾಗಿದೆ ಅಧ್ಯಕರ ಬದಲಾವಣೆ ನಮ್ಮ ವ್ಯಾಪ್ತಿಯಲ್ಲಿ ಇಲ್ಲ ಅದು ಹೈಕಮಾಂಡ್ ವ್ಯಾಪ್ತಿಯಲ್ಲಿದೆ ಅವರಿಗೆ ಬಿಟ್ಟಿದ್ದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು