ಬೆಳಗಾವಿ: ಬೀದಿ ಬಳಿ ವ್ಯಾಪಾರಿಗಳು ನಿಮ್ಮ ಬಳಿ ಬರುವ ಗ್ರಾಹಕರಿಗೆ ಮನೆಯಿಂದ ಕೈ ಚೀಲಗಳನ್ನು ತೆಗೆದುಕೊಂಡು ಬಾ ಅಕ್ಕಾ ಅಣ್ಣಾ ಅಪ್ಪಾ ಎಂದು ಕೈ ಮುಗಿದು ಹೇಳಿದರೆ ಬೆಳಗಾವಿ ಮಹಾನಗರ ಸುಂದರ ನಗರವಾಗುತ್ತೆ. ಪ್ಲಾಸ್ಟಿಕ್ ಬಳಕೆ ಶೂನ್ಯ ಮಾಡಲು ಬೀದಿ ಬಳಿ ವ್ಯಾಪಾರಿಗಳ ಪಾತ್ರ ಪ್ರಮುಖವಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ಶುಭಾ ಬಿ ಹೇಳಿದರು
ಮಂಗಳವಾರ ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭಾಗೃಹದಲ್ಲಿ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ನಗರ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪಘಟಕ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿ ರಚನೆ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿ, ಚುನಾವಣೆಯಲ್ಲಿ ಗೆದ್ದಿದ್ದೇವಿ ಅಲ್ಲಾ ಬೀದಿ ಬದಿ ವ್ಯಾಪಾರಸ್ಥರು ಒಗ್ಗಟ್ಟಾಗಿರಬೇಕು ನೀವು ಒಗ್ಗಟ್ಟಾಗಿ ನಿಂತಾಗ ನಮ್ಮ ಪಾಲಿಕೆಯಿಂದ ದೊರೆಯುವ ಸೌಲಭ್ಯಗಳು ನೀವು ಹಕ್ಕಿನಿಂದ ಕೇಳಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ ಅವರು ಹೇಳಿದರು.
ಇನ್ನು ಮಹಾಪೌರ ಮಂಗೇಶ್ ಪವಾರ್ ಅವರು ತರಕಾರಿ ವ್ಯಾಪಾರಿಗಳು ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಯನ್ನು ಬಂದ್ ಮಾಡಬೇಕು. ಮನೆಯಿಂದ ಕೈಚೀಲ ತರುವವರಿಗೆ ಸ್ವಲ್ಪ ಹೆಚ್ಚಿನ ವಸ್ತುಗಳನ್ನು ನೀಡಿ ಅಥವಾ ಸ್ವಲ್ಪ ಹಣವನ್ನು ಕಡಿಮೆ ಸ್ವೀಕರಿಸಿ, ಗ್ರಾಹಕರನ್ನು ಆಕರ್ಷಿಸಿ, ಪ್ಲಾಸ್ಟಿಕ್ ಬಳಕೆ ತಗ್ಗಿಸಲು ಸಹಯೋಗ ನೀಡಬೇಕೆಂದು ಕರೆ ನೀಡಿದರು.
ಆಡಳಿತಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ ಇಲ್ಲಿನ ಮಾರ್ಗಸೂಚಿ ಪ್ರಕಾರ ಕರ ದರ ನಿಗಧಿ ಮಾಡುತ್ತಾರೆ ಬೀದಿ ಬಳಿ ವ್ಯಾಪರಸ್ಥರು ಸ್ಥಳಾವಕಾಶ ಮಾಡಿಕೊಂಡು ವ್ಯಾಪಾರ ನಡೆಸಿ ನಿಮ್ಮ ಜೊತೆಯಲ್ಲಿ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಹೊಂದಾಣಿಕೆಯಿಂದ ಇರುವಂತೆ ವಿನಂತಿಸಿದರು.
ಇನ್ನು ವಿರೋಧ ಪಕ್ಷದ ನಾಯಕ ಮುಜಮ್ಮಿಲ್ ಢೋಣಿ ಅವರು ವ್ಯಾಪಾರಿಗಳು ತಮ್ಮ ವ್ಯಾಪಾರದ ಬಳಿಕ ಉಳಿದ ತರಕಾರಿಗಳನ್ನು ಅತ್ತಿತ್ತ ಎಸೆಯದೇ, ಅವುಗಳನ್ನು ಯೋಗ್ಯ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದರು.
ಇದೇ ವೇಳೆ ನಗರ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪಘಟಕ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯ ಖಾಲಿ ಸ್ಥಾನಗಳಿಗಾಗಿ ಚುನಾವಣೆಯನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಮುಝಮ್ಮಿಲ್ ಢೋಣಿ ಸೇರಿದಂತೆ ಪಾಲಿಕೆಯ ಸಿಬ್ಬಂದಿ ಸೇರಿದಂತೆ ಬೀದಿ ಬಳಿ ವ್ಯಾಪಾರಿಗಳು ಹಾಜರಿದ್ದರು.