BELAGAVI

ಸದಾಶಿವನಗರದಲ್ಲಿ ಧರೆಗುರುಳಿದ ಮರ…

Share

ಬೆಳಗಾವಿಯ ಸದಾಶಿವನಗರ ರೈಲ್ ನಗರದ ಹತ್ತಿರ ಕಳೆದ ರಾತ್ರಿ ಮಳೆಗಾಳಿಗೆ ಮರವೊಂದು ಧರೆಗುರುಳಿ ಜನರಿಗೆ ಓಡಾಡಲು ಅನಾಕೂಲವಾಗಿದ್ದು, ಇಲ್ಲಿಯ ವರೆಗೂ ಯಾವುದೇ ಇಲಾಖೆಯವರು ತೆರವುಗೊಳಿಸಲು ಬಾರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿಯ ಸದಾಶಿವನಗರ ರೈಲ್ ನಗರದ ಹತ್ತಿರ ಕಳೆದ ರಾತ್ರಿ ಮಳೆಗಾಳಿಗೆ ಮರವೊಂದು ಧರೆಗುರುಳಿದೆ. ಸ್ಥಳೀಯರು ಸಂಬಂಧಿಸಿದ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸೋಮವಾರ ರಾತ್ರಿ ಬಿದ್ದ ಮರವನ್ನು ಮಂಗಳವಾರ ಸಂಜೆಯಾದರೂ ಯಾರು ತೆರವುಗೊಳಿಸಿಲ್ಲ. ಜನರಿಗೆ ಓಡಾಡಲೂ ತೊಂದರೆಯಾಗುತ್ತಿದ್ದು, ಇಲ್ಲಿನ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Tags:

error: Content is protected !!