Belagavi

ಡಾ. ಅಂಜನಾ ಬಾಗೇವಾಡಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ

Share

ಬ್ಯಾಂಕಾಕ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಅಂಜನಾ ಬಾಗೇವಾಡಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಕೆಎಲ್‌ಇ ವಿಕೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಬೆಳಗಾವಿಯ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಉಪ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಾದ ಡಾ. ಅಂಜನಾ ಬಾಗೇವಾಡಿ, ಜುಲೈ 9 ರಿಂದ 12ರ ವರೆಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ “ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ & ರೇಡಿಯಾಲಜಿ” ಯ 1ನೇ ಅಂತರರಾಷ್ಟ್ರೀಯ ಹಾಗೂ 23ನೇ ರಾಷ್ಟ್ರೀಯ ಸ್ನಾತಕೋತ್ತರ ಸಮಾವೇಶದಲ್ಲಿ ವಿಜ್ಞಾನ ಪ್ರಬಂಧವನ್ನು ಮಂಡಿಸಿದರು.

ಅವರು “ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಸಮಗ್ರ ಮಾರ್ಗವಾದ ಪೋರ್ಟ್ಫೋಲಿಯೋ” ಎಂಬ ಪ್ರಬಂಧವನ್ನು ಅಧ್ಯಾಪಕರ ಅಧಿವೇಶನದಲ್ಲಿ ಮಂಡಿಸಿದರು. ಅವರ ಪ್ರಸ್ತುತಿಯು ತಜ್ಞರಿಂದ ಪ್ರಶಂಸಿತವಾಗಿದ್ದು, “ಅತ್ಯುತ್ತಮ ಪ್ರಬಂಧ” ಪ್ರಶಸ್ತಿಗೆ ಭಾಜನರಾದರು.

ಡಾ. ಅಂಜನಾ ಅವರ ಈ ಸಾಧನೆಯು ಸಂಸ್ಥೆಗೆ ಹೆಮ್ಮೆ ತಂದಿದ್ದು, ಅವರ ಯಶಸ್ಸಿಗೆ ಪ್ರಾಂಶುಪಾಲರಾದ ಡಾ. ಅಲ್ಕಾ ಕಾಳೆ, ಡೀನ್ ಡಾ. ವಿನಾಯಕ ಕುಂಬೋಜ್ಕರ್, ವಿಭಾಗದ ಮುಖ್ಯಸ್ಥೆ ಡಾ. ವೈಶಾಲಿ ಕೆಲುಸ್ಕರ್ ಹಾಗೂ ಸಿಬ್ಬಂದಿ ವರ್ಗ ಅವರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Tags:

error: Content is protected !!