Dharwad

ಧಾರವಾಡದಲ್ಲಿ ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ, ಯಾದಗಿರಿಯ ಹುಣಚಗಿ ಯುವಕ ಧಾರವಾಡದಲ್ಲಿ ನೇಣಿಗೆ ಶರಣು.

Share

ಧಾರವಾಡ : ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ರಜತಗಿರಿಯಲ್ಲಿ ನಡೆದಿದೆ.

ಮೂಲತಃ ಯಾದಗಿರಿ ಜಿಲ್ಲೆಯ ಹುಣಚಗಿ ಗ್ರಾಮದ ಅಶೋಕ (23) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನೆಂದು ಗುರುತಿಸಲಾಗಿದೆ. ಅಶೋಕ ಧಾರವಾಡ ಸೋನಿಯಾ ಕಾಲೇಜಿನಲ್ಲಿ ಡಿ ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದನ್ನು. ಈ ಯುವಕ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯೊಳಗೆ ಘಟನೆ ನಡೆದಿದೆ.

Tags:

error: Content is protected !!