Chikkodi

ಶಕ್ತಿ ಯೋಜನೆಯಿಂದ ಮೈಲಿಗಲ್ಲು, ಬಸ್ ನಲ್ಲಿ ಪ್ರಯಾಣಿಸಿದ ಶಾಸಕ ಗಣೇಶ ಹುಕ್ಕೇರಿ

Share

ಚಿಕ್ಕೋಡಿ:ಕಾಂಗ್ರೆಸ್‌ನ ಶಕ್ತಿ ಯೋಜನೆಯ ಪರಿಣಾಮದಿಂದಾಗಿ ಎರಡೇ ವರ್ಷದಲ್ಲಿ ಉಚಿತ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಒಟ್ಟು 500 ಕೋಟಿಗೆ ತಲುಪಲಿದ ಹಿನ್ನೆಲೆಯಲ್ಲಿ ಸದಲಗಾ ಪಟ್ಟಣದಲ್ಲಿ ಶಾಸಕ ಗಣೇಶ ಹುಕ್ಕೇರಿ ಬಸ್ ನಲ್ಲಿ ಗಮನಸೆಳೆದರು. ಸದಲಗಾ ಪಟ್ಟಣದಲ್ಲಿ ಉಚಿತ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಒಟ್ಟು 500 ಕೋಟಿಗೆ ತಲುಪಲಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮದ ಬಳಿಕ‌ ಬಸ್ ನಲ್ಲಿ ಶಾಸಕ ಗಣೇಶ ಹುಕ್ಕೇರಿ ಪ್ರಯಾಣಿಸಿದರು.

ಬಳಿಕ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಶಕ್ತಿ ಯೋಜನೆ ಜಾರಿಯಾದ ಎರಡೇ ವರ್ಷದಲ್ಲಿ 500 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿ ದಾಖಲೆ ಬರೆದಿದ್ದಾರೆ. 2023ರ ಜೂನ್ 11ರಂದು ಆರಂಭವಾಗಿದ್ದ ಈ ಯೋಜನೆಗೆ ಮಹಿಳೆಯರು ಬಹುಪರಾಕ್ ಎಂದಿದ್ದು, ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಬರೋಬ್ಬರಿ 500 ಕೋಟಿ ಮಹಿಳಾ ಪ್ರಯಾಣಿಕರು ಒಂದು ರೂಪಾಯಿ ಹಣ ನೀಡದೆ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದರು.

ಪಂಚಗ್ಯಾರಂಟಿ ಯೋಜನೆಗಳು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಜನರು ಸಹ ಇದರ ಲಾಭಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ‌ಪುರಸಭೆ ಅಧ್ಯಕ್ಷ ರಾಜು ಗುಂಡಕಲ್ಲೇ ಉಪಾಧ್ಯಕ್ಷ ವಿಜಯಲಕ್ಷ್ಮೀ ಸಂತೋಷ ನವಲೆ ಗ್ಯಾರಂಟಿ ತಾಲೂಕಾ ಅಧ್ಯಕ್ಷ ರಮೇಶ ಪಾಟೀಲ, ಸುದರ್ಶನ ಖೋತ,ಅರುಣ ದೇಸಾಯಿ,ರಾಜಶ್ರೀ ಅನುರೆ ಸಂತೋಷ ನವಲೆ,ಉದಯ ಬದನೆಕಾಯಿ,ರವಿ ಗೋಸಾವಿ,ಸತೀಶ ಪಾಟೀಲ ಭೀಮಾ ಮಾಳಗೆ ಅತಾವುಲ್ಲಾ ಮುಜಾವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!